2024-12-24 07:51:01

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬಿರುಕು ಬಿಟ್ಟ ತುಟಿಗಳಿಗೆ ಈ ಮನೆಮದ್ದು ಪರಿಹಾರ

ಬೇಸಿಗೆಯಲ್ಲಿ ಬಿಸಿಲಿನ ಝಳ ಒಂದೆಡೆಯಾದರೆ ಕಾಡುವ ಆರೋಗ್ಯ ಸಮಸ್ಯೆಗಳು ಇನ್ನೊಂದೆಡೆ. ಚಳಿಗಾಲ ಮಾತ್ರವಲ್ಲದೇ ಬೇಸಿಗೆಯಲ್ಲಿ ತುಟಿ ಬಿರುಕು ಬಿಡುತ್ತದೆ.

 ಈ ಕಾರಣಕ್ಕೆ ಬೇಸಿಗೆಗಾಲ ಬೇಡವೇ ಬೇಡ ಎಂದೇಳುವವರೇ ಹೆಚ್ಚು. ಆದರೆ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಅಂದವಾದ ತುಟಿಯನ್ನು ರಕ್ಷಿಸಿಕೊಳ್ಳಬಹುದು.

ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವುದೇ ತುಟಿಗಳು. ಆದರೆ ಕೆಲವರ ತುಟಿಗಳು ಋತುಮಾನಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಈ ಬೇಸಿಗೆಯಲ್ಲಿ ಅತಿಯಾದ ಶಾಖ ಮತ್ತು ಸೂರ್ಯನ ಕಿರಣಗಳಿಂದ ತುಟಿಗಳು ಒಣಗುವುದು ಸಹಜ. ಒಂದು ವೇಳೆ ಸುಡು ಬಿಸಿಲಿನಲ್ಲಿ ನಿಮ್ಮ ತುಟಿಗಳು ಅಂದ ಕಳೆದುಕೊಂಡಿದ್ದರೆ ಈ ಮನೆ ಮದ್ದಿನಿಂದ ಪರಿಹಾರ ಕಂಡುಕೊಳ್ಳಿ.

ಒಣ ತುಟಿಗೆ ಸರಳ ಮನೆಮದ್ದುಗಳು:

•         ಬೇಸಿಗೆಯಲ್ಲಿ ಹೆಚ್ಚಾಗಿ ಬಿಸಿಲಿರುವ ಕಾರಣ ಹೆಚ್ಚು ನೀರು ಕುಡಿಯುವ ಮೂಲಕ ಒಣತುಟಿ ಸಮಸ್ಯೆಯಿಂದ ಮುಕ್ತರಾಗಬಹುದು.

•         ಒಣಗಿದ ತುಟಿಗಳಿಗೆ ತೆಂಗಿನ ಎಣ್ಣೆಯನ್ನು ನೇವರಿಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

•         ತುಟಿಗಳಿಗೆ ಹರಳೆಣ್ಣೆ ಅಥವಾ ಆಲಿವ್ ಎಣ್ಣೆ ಹಚ್ಚುವುದು ಕೂಡ ಪರಿಣಾಮಕಾರಿಯಾಗಿದೆ.

•         ಜೇನುತುಪ್ಪ ಹಾಗೂ ವ್ಯಾಸಲಿನನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ತುಟಿಗಳಿಗೆ ರಾತ್ರಿ ಮಲಗುವ ವೇಳೆ ಹಚ್ಚುಕೊಳ್ಳುವುದು ತುಟಿ ಒಣಗುವ ಹಾಗೂ ಬಿರುಕು ಬಿಡುವ ಸಮಸ್ಯೆಯು ದೂರವಾಗುತ್ತದೆ.

•         ಗುಲಾಬಿ ಹೂವಿನ ಎಲೆಗಳನ್ನು ವ್ಯಾಸಲಿನ್ನೊಂದಿಗೆ ಮಿಶ್ರಣ ಮಾಡಿ ಹಚ್ಚಿಕೊಂಡರೆ ಶೀಘ್ರ ಪರಿಹಾರ ದೊರೆಯುತ್ತದೆ.

•         ಮುಳ್ಳು ಸೌತೆಕಾಯಿ ಹೋಳುಗಳನ್ನು ಎರಡ್ಮೂರು ನಿಮಿಷಗಳ ಕಾಲ ತುಟಿಗಳ ಮೇಲೆ ನಿಧಾನವಾಗಿ ಮಸಾಜ್ ಮಾಡುವುದರಿಂದ ಒಣತುಟಿಯು ಇಲ್ಲದಂತಾಗುತ್ತದೆ.

Post a comment

No Reviews