
ಈ ಸರಳ ಹಂತವನ್ನು ಅನುಸರಿಸಿ ನಿಮ್ಮ ತಲೆ ಹೊಟ್ಟನ್ನು ನಿವಾರಿಸಿ. ಮೊದಲಿಗೆ ನೀವು ಮೆಂತೆಯನ್ನು ಒಂದು ಸಣ್ಣ ಬಟ್ಟಲಿಗೆ ಹಾಕಿಟ್ಟು ಅದಕ್ಕೆ ನೀರು ಹಾಕಿ ರಾತ್ರಿಯಿಡೀ ನೆನೆಯಲು ಬಿಡಿ. ನೀವು ಬೆಳಿಗ್ಗೆ ಎದ್ದ ನಂತರ ಬೀಜಗಳನ್ನು ಪೇಸ್ಟ್ ತರಹದ ರುಬ್ಬಿಕೊಳ್ಳಿ ನಂತರ ಈ ಪೇಸ್ಟ್‌ಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಪೇಸ್ಟ್ ಆಗಿ ರೂಪುಗೊಂಡ ನಂತರ, ಅದನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ ಮತ್ತು 30 ನಿಮಿಷಗಳ ಕಾಲ ಒಣಗಲು ಬಿಡಿ. 30 ನಿಮಿಷಗಳ ನಂತರ, ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ ಇದರಿಂದ ನಿಮ್ಮ ಕೂದಲಿನ ಹೊಟ್ಟು ನಿವಾರಣೆಯಾಗಿ ನಿಮ್ಮ ಕೂದಲು ಉದುರುವಿಕೆ ನಿವಾರಣೆ ಆಗುತ್ತದೆ.
Poll (Public Option)

Post a comment
Log in to write reviews