
ಉದ್ದ ಹಾಗೂ ದಪ್ಪನೆಯ ಕೂದಲನ್ನು ಪಡೆಯಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಇದಕ್ಕಾಗಿ ಹಲವಾರು ಪ್ರಯತ್ನಗಳನ್ನು ಮಾಡಿ ಬೆಸೋತ್ತಿರುವವರು ಇದ್ದಾರೆ. ಆದರೆ ಇಂದು ನಾವು ಹೇಳಲು ಹೊರಟಿರುವ ಮನೆಮದ್ದು ನಿಮ್ಮ ಕೂದಲನ್ನು ಬುಡದಿಂದ ಸ್ಟ್ರಾಂಗ್ ಮಾಡುವುದರ ಜೊತೆಗೆ ಉದ್ದ ಮತ್ತು ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ.
ಒಂದು ಬೌಲ್‌ನಲ್ಲಿ ಕಾಫಿ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಕಂಡೀಷನರ್, ಅಲೋವೆರಾ ಜಲ್ ಮತ್ತು ತೆಂಗಿನ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಆ ಪೇಸ್ಟ್‌ನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ, ಶಾಂಪು ಬಳಸಿ ತಲೆಯನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಬುಡದಿಂದ ಸ್ಟ್ರಾಂಗ್ ಆಗುವುದರ ಜೊತೆಗೆ ಉದ್ದ ಮತ್ತು ದಪ್ಪವಾಗಿ ಹೊಳೆಯುವ ಕೇಶರಾಶಿ ನಿಮ್ಮದಾಗುತ್ತದೆ.
Poll (Public Option)

Post a comment
Log in to write reviews