
ಸೀಬೆಹಣ್ಣು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರ ರುಚಿ, ಸ್ವಾದ, ಬಣ್ಣ ಎಲ್ಲವೂ ಇಷ್ಟವಾಗುತ್ತದೆ. ಜೊತೆಯಲ್ಲಿ ಉತ್ತಮ ಪೌಷ್ಟಿಕಾಂಶಗಳು ಒಳಗೊಂಡಿದೆ. ಮುಖ್ಯ ವಾಗಿ ಇದು ಕ್ಯಾಲ್ಸಿಯಂ, ಪ್ರೊಟೀನ್, ನಾರಿನ ಅಂಶ ಮತ್ತು ಇನ್ನು ಅನೇಕ ಸತ್ವಗಳನ್ನು ತನ್ನಲ್ಲಿ ಒಳಗೊಂಡಿದೆ. ಹೀಗಾಗಿ ಅನೇಕ ರೋಗಗಳಿಗೆ ಇದು ರಾಮ ಬಾಣವಾಗಿ ಕೆಲಸ ಮಾಡುತ್ತದೆ. ಜೊತೆಗೆ ಇದು ಮಧುಮೇಹ ಸ್ನೇಹಿ ಎನ್ನುವ ಹೆಸರನ್ನು ಸಹ ಪಡೆದಿದೆ. ಸೀಬೆ ಹಣ್ಣಿನಲ್ಲಿ ಕೆಂಪು ಬಣ್ಣದ ಸೀಬೆಹಣ್ಣು ತುಂಬಾ ಫೇಮಸ್. ಇದರಲ್ಲಿ ಸಿಗುವ ಆರೋಗ್ಯ ಪ್ರಯೋಜನಗಳು ಅಷ್ಟು ಅಪಾರವಾಗಿವೆ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರ ಹೃದಯಕ್ಕೆ ಶತ್ರು ಎಂದರೆ ಅದು ಕೆಟ್ಟ ಕೊಲೆಸ್ಟ್ರಾಲ್. 100 ಗ್ರಾಂ ಗಾತ್ರದ ಸೀಬೆಹಣ್ಣು ತನ್ನಲ್ಲಿ 7 ಗ್ರಾಂ ನಾರಿನ ಅಂಶವನ್ನು ಒಳ ಗೊಂಡಿದ್ದು, ಇದರಲ್ಲಿ ಕರಗದೇ ಇರುವ ನಾರಿನ ಅಂಶ ಜಾಸ್ತಿ ಇದೆ. ಇದು ಪ್ರಮುಖವಾಗಿ ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕರಗಿಸು ವಲ್ಲಿ ನಿರಂತರವಾಗಿ ಕೆಲಸ ಮಾಡುತ್ತದೆ.
ಕೆಂಪು ಸೀಬೆಹಣ್ಣು ತನ್ನಲ್ಲಿ ವಿಟಮಿನ್ ಸಿ ಪ್ರಮಾಣವನ್ನು ಹೇರಳವಾಗಿ ಹೊಂದಿದ್ದು, ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಮುಖ್ಯವಾಗಿ ಗಾಯವನ್ನು ವಾಸಿ ಮಾಡುವಲ್ಲಿ ಇದರ ಪಾತ್ರ ಬಹಳವಾಗಿರುತ್ತದೆ. 100 ಗ್ರಾಂ ಗಾತ್ರದ ಸೀಬೆಹಣ್ಣು ತನ್ನಲ್ಲಿ 228 ಮಿಲಿ ಗ್ರಾಂ ನಷ್ಟು ವಿಟಮಿನ್ ಸಿ ಒಳಗೊಂಡಿದೆ.
ಸೀಬೆ ಹಣ್ಣಿನಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಲೈಕೋಪಿನ್ ಎಂಬ ಎರಡು ಆಂಟಿ ಆಕ್ಸಿಡೆಂಟ್ ಅಂಶಗಳು ಇರಲಿದ್ದು, ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಗುಣ ಪಡೆದಿವೆ. ಹಾಗಾಗಿ ನಮ್ಮ ಚರ್ಮದ ಹಾನಿಯ ವಿರುದ್ಧ ರಕ್ಷಣೆ ಒದಗಿಸುವಲ್ಲಿ ಇವು ಕೆಲಸ ಮಾಡುತ್ತವೆ ಮತ್ತು ವಯಸ್ಸನನ್ನು ಮೆರಮಚುಸುತ್ತದೆ .
ಸೀಬೆ ಹಣ್ಣಿನಲ್ಲಿ ನೀರಿನ ಅಂಶ ಮತ್ತು ನಾರಿನ ಅಂಶ ಹೆಚ್ಚಾಗಿದೆ. ಪೌಷ್ಟಿಕಾಂಶಗಳ ಪ್ರಮಾಣ ಕೂಡ ಹೇರಳವಾಗಿದೆ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಮಧ್ಯಾಹ್ನದ ಸಮಯದಲ್ಲಿ ಕೆಂಪು ಸೀಬೆ ಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಇದು ತೂಕವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಬೊಜ್ಜಿನ ನಿಯಂತ್ರಣ ಕೂಡ ಮಾಡುತ್ತದೆ..
Poll (Public Option)

Post a comment
Log in to write reviews