
ಸನ್‌ಟ್ಯಾನ್‌ನಿಂದಾಗಿ ಕಾಲಿನಲ್ಲಿ ಚಪ್ಪಲಿ ಕಲೆ ಎದ್ದು ಕಾಣ್ತಿದ್ಯಾ? ಈ ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಟಿಪ್ಸ್..
ಪಾದಗಳ ಕಪ್ಪು ಬಣ್ಣವನ್ನು ತೆಗೆದುಹಾಕಲು, ಕಡಲೆಹಿಟ್ಟು ಮತ್ತು ಅರಿಶಿಣದ ಪಾಕವಿಧಾನ ಅಳವಡಿಸಿಕೊಳ್ಳಬಹುದು.
* ಕಡಲೆಹಿಟ್ಟು ಸೂಕ್ಷ್ಮವಾದ ಕಣಗಳನ್ನು ಹೊಂದಿರುತ್ತದೆ. ಇದು ಚರ್ಮದ ಆಳವಾದ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ.
* ಅರಿಶಿಣದ ಬಳಕೆಯಿಂದ ಟ್ಯಾನಿಂಗ್ ತೆಗೆದು ಹಾಕಬಹುದು.
ಅದಕ್ಕಾಗಿ ಒಂದು ಬಟ್ಟಲಿನಲ್ಲಿ ಎರಡು ಚಮಚ ಕಡಲೆಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಅರಿಶಿನ ಸೇರಿಸಿ. ಸ್ವಲ್ಪ ಮೊಸರು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿ. ಅದನ್ನು ಕಾಲಿಗೆ ಹಚ್ಚಿ 10 ನಿಮಿಷಗಳ ಕಾಲ ನಿಮ್ಮ ಪಾದಗಳಿಗೆ ಮಸಾಜ್ ಮಾಡಿ ನಂತರ ತಣ್ಣೀರಿನಿಂದ ತೊಳೆಯಿರಿ.
ಹೀಗೆ ಮಾಡುವುದರಿಂದ ಪಾದದ ಕಪ್ಪು ಕಲೆಗಳು ನಿವಾರಣೆಯಾಗಿ ಕಾಲಿನ ಬಣ್ಣ ಕಾಂತಿಯುತವಾಗುತ್ತದೆ.
Poll (Public Option)

Post a comment
Log in to write reviews