
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ರಾಜ್ಯದಲ್ಲಿ ಲಿಕ್ವಿಡ್ ನೈಟ್ರೋಜನ್ ಆಹಾರ ಬ್ಯಾನ್ ಮಾಡುವಂತೆ ಆದೇಶ ಹೊರಡಿಸಿದೆ. ಲಿಕ್ವಿಡ್ ನೈಟ್ರೋಜನ್‌ನ್ನು ಕಂಟ್ರೋಲ್ ಫ್ರೀಜಿಂಗ್ ಮತ್ತು ಕೂಲಿಂಗ್ ಎಜೆಂಟ್ ಆಗಿ ಬಳಸಲು ಮಾತ್ರ ಅವಕಾಶವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನು ಸ್ಮೋಕಿ ಬಿಸ್ಕೆಟ್ ಹಾಗೂ ಸ್ಮೋಕಿ ಡೆಸಾರ್ಟ್ ಆಗಿ ಬಳಸಲಾಗುತ್ತಿದೆ. ಈ ರೀತಿ ಆಹಾರಗಳಲ್ಲಿ ಬಳಸಲು ಅನುಮೋದನೆ ಇಲ್ಲ. ಈ ಲಿಕ್ವಿಡ್ ನೈಟ್ರೋಜನ್ ಸೇವನೆಯಿಂದ ಜೀರ್ಣಾಂಗ ಭಾಗದಲ್ಲಿ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಆಹಾರದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ನಿಷೇಧ ಮಾಡಲಾಗಿದೆ. ಆಹಾರ ಗುಣಮಟ್ಟ ಕಾಯ್ದೆ -2006ರ ನಿಯಮದಡಿ ಕಾನೂನು ಬಾಹಿರವಾಗಿ ಮಾರಾಟ ಮಾಡಿದಲ್ಲಿ. 7 ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ಹಾಗೂ 10ಲಕ್ಷ ದಂಡ ವಿದಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
Poll (Public Option)

Post a comment
Log in to write reviews