2024-12-24 06:31:04

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮುಖದ ಚರ್ಮ ಸುಕ್ಕುಗಟ್ಟುತ್ತಿದೆಯೇ? ಹಾಗಾದ್ರೆ, ಸುಕ್ಕು ನಿವಾರಣೆಗೆ ಇಲ್ಲಿದೆ ನೋಡಿ ಎರಡು ಬಗೆಯ ನೈಸರ್ಗಿಕ ತೈಲ

ವಯಸ್ಸಾದಂತೆ ಚರ್ಮ ಸುಕ್ಕುಗಟ್ಟುವುದು ಒಂದು ನೈಸರ್ಗಿಕವಾದ ಪ್ರಕ್ರಿಯೆಯಾಗಿದೆ ಮತ್ತು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕೆಲವರಿಗೆ ವಯಸ್ಸಾಗುವ ಮುಂಚೆಯೇ ಚರ್ಮದಲ್ಲಿ ಸುಕ್ಕುಗಳು ಬರಲು ಶುರುವಾಗುತ್ತದೆ. ಇದು ಚರ್ಮದ ಸೌಂದರ್ಯವನ್ನು ಕಳೆಗುಂದಿಸುತ್ತದೆ. ಚರ್ಮ ಸುಕ್ಕುಗಟ್ಟುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ ವಾತಾವರಣದ ಮಾಲಿನ್ಯದ ಜೊತೆಗೆ ನಮ್ಮ ಕೆಟ್ಟ ಜೀವನಶೈಲಿಯೂ ಒಂದು ಕಾರಣವಾಗಿರುತ್ತದೆ. ಚರ್ಮವು ಹೊರಗಿನ ವಾತಾವರಣದೊಂದಿಗೆ ಹೆಚ್ಚು ಸಂಪರ್ಕಕ್ಕೆ ಬರುವ ಭಾಗವಾಗಿದೆ. ಹೊರಗಡೆ ಹೆಚ್ಚು ಓಡಾಡುವುದರಿಂದ ವಾತಾವರಣದ ಕೊಳೆ, ಧೂಳು, ಮಾಲಿನ್ಯ ಚರ್ಮದ ಮೇಲೆ ಅಂಟಿಕೊಳ್ಳುತ್ತದೆ. ಇದು ಮೊದಲು ಚರ್ಮದ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ.

ಹಾಗಾಗಿ ಪ್ರತಿದಿನ ಚರ್ಮದ ಆರೈಕೆ ಮಾಡಬೇಕು ಮತ್ತು ಸರಿಯಾದ ಆಹಾರಗಳನ್ನು ಸೇವಿಸಬೇಕು. ಇದರಿಂದಾಗಿ ಚರ್ಮ ಆರೋಗ್ಯಕರವಾಗಿರುತ್ತದೆ ಮತ್ತು ಚರ್ಮಕ್ಕೆ ಬೇಗ ವಯಸ್ಸಾ ಗುವುದನ್ನು ತಡೆಯಬಹುದು. ಅಲ್ಲದೇ ಚರ್ಮಕ್ಕೆ ಎಣ್ಣೆಯ ಮಸಾಜ್ ಮಾಡುವುದರಿಂದ ಕೂಡ ಈ ಸುಕ್ಕುಗಟ್ಟುವ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಹಾಗಾಗಿ ಮುಖದ ಮೇಲಿನ ಸುಕ್ಕುಗಳಿಗೆ ಯಾವ ಸಾರಭೂತ ತೈಲ ಒಳ್ಳೆಯದು? ಎಂಬುದನ್ನು ತಿಳಿಯಿರಿ.

ಚರ್ಮ ಬಿಗಿಯಾಗಲು ತೆಂಗಿನೆಣ್ಣೆ ಮತ್ತು ಹರಳೆಣ್ಣೆ

  • ತೆಂಗಿನೆಣ್ಣೆ ಮತ್ತು ಹರಳೆಣ್ಣೆಯನ್ನು ಬಹಳ ಹಿಂದಿನ ಕಾಲದಿಂದಲೂ ಕೂದಲಿನ ಆರೋಗ್ಯಕ್ಕಾಗಿ ಬಳಸುತ್ತಿದ್ದರು. ಆದರೆ ಇದು ಚರ್ಮದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹರಳೆಣ್ಣೆಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ.
  • ಆದರೆ ಇಂದಿನ ಜನರಿಗೆ ಕೂದಲಿಗೆ, ಚರ್ಮಕ್ಕೆ ಎಣ್ಣೆ ಹಚ್ಚುವುದೆಂದರೆ ಆಗುವುದಿಲ್ಲ, ಒಂದು ಹನಿ ಎಣ್ಣೆ ಮೈಮೇಲೆ ಬಿದ್ದರೆ ಸಾಕು ಕಿರಿಕಿರಿ ಮಾಡಿಕೊಳ್ಳುತ್ತಾರೆ.ಇದರ ಬದಲು ಅವರು ದುಬಾರಿ ಹಣಕೊಟ್ಟು ರಾಸಾಯನಿಕಯುಕ್ತ ಕ್ರೀಂಗಳನ್ನು ಬೇಕಾದರೆ ಖರೀದಿಸಿ ಬಳಸುತ್ತಾರೆ.
  • ಆದರೆ ಈ ಕ್ರೀಂಗಳು ಚರ್ಮಕ್ಕೆ ಹಾನಿಕಾರಕವಾಗಿದೆ ಎಂಬ ಅರಿವು ಅವರಿಗಿರುವುದಿಲ್ಲ. ಇವು ಮುಖದ ಅಂದವನ್ನು ಹೆಚ್ಚಿಸುವ ಬದಲು ಮತ್ತಷ್ಟು ಕೆಡಿಸಬಹುದು. ಹಾಗಾಗಿ ಸುಕ್ಕುಗಳನ್ನು ತಡೆಗಟ್ಟಿ, ಚರ್ಮವನ್ನು ಮತ್ತೆ ಯೌವನದಿಂದ ಕೂಡಿರುವಂತೆ ಮಾಡಲು ತೆಂಗಿನೆಣ್ಣೆ ಮತ್ತು ಹರಳೆಣ್ಣೆಯನ್ನು ಬಳಸಿ. ಈ ನೈಸರ್ಗಿಕ ತೈಲಗಳ ಸಹಾಯದಿಂದ ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಬಹುದು. ಹಾಗಾಗಿ ಅವುಗಳ ಪ್ರಯೋಜನವನ್ನು ತಿಳಿದುಕೊಳ್ಳಿ.

Post a comment

No Reviews