2024-12-24 06:05:45

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಉತ್ತಮ ಆರೋಗ್ಯ ಹಾಗೂ ಫಿಟ್‌ನೆಸ್‌ಗಾಗಿ ರೈನ್‌ಬೋ ಡಯಟ್‌ ಫಾಲೋ ಮಾಡಿ

ಬಣ್ಣಗಳ ಲೋಕವಿದು, ಬಣ್ಣವಿಲ್ಲದೆ ಲೋಕವೇ ಇಲ್ಲ. ಇಲ್ಲಿ ಎಲ್ಲವೂ ಕಲರ್ ಫುಲ್. ಒಂದೊಂದು ಬಣ್ಣವೂ ಎಲ್ಲರನ್ನು ಆಕರ್ಷಿಸುವ ಜೊತೆಗೆ ಉತ್ತಮ ಸಂದೇಶ ಕೊಡುತ್ತೆ. ಕಾಮನಬಿಲ್ಲಿನ ಏಳು ಬಣ್ಣಗಳ ಸಂಗಮ ನೋಡಲು ಅದ್ಬುತ. ಇದೇ ಬಣ್ಣದಲ್ಲಿ ನಮ್ಮ ಆರೋಗ್ಯವೂ ಅಡಗಿದೆ. ಬಣ್ಣಗಳು ಜೀವನವನ್ನು ಚೇತನಗೊಳಿಸುವುದಲ್ಲದೆ ದೇಹದ (ಶಕ್ತಿಯನ್ನು ಉತ್ತೇಜನಗೊಳಿಸುತ್ತದೆ. ನಮ್ಮ ಆಹಾರದಲ್ಲಿ ಬಳಸುವ ಪದಾರ್ಥಗಳು ಅಥವಾ ತರಕಾರಿಯ ಬಣ್ಣಗಳು ಒಂದೊಂದು ವಿಶೇಷ ಅಂಶವನ್ನು ಹೊಂದಿರುತ್ತದೆ. ಯಾವುದೇ ನಿಯಮಗಳ ಬಂಧನವಿಲ್ಲದೆ ನಮ್ಮ ಆಹಾರ ಕ್ರಮವನ್ನು ಉತ್ತಮಪಡಿಸಿಕೊಳ್ಳಬಹುದು. ಕಾಮನಬಿಲ್ಲನ್ನು ನೋಡುವುದರಿಂದ ನೀವು ಪ್ರತಿಯೊಂದು ಸಮಸ್ಯೆಯನ್ನು ಮರೆಯುವಂತೆ, ಕಾಮನಬಿಲ್ಲು ಆಹಾರ ತಿನ್ನೋದ್ರಿಂದ ಪ್ರತಿಯೊಂದು ರೋಗವನ್ನು ದೂರ ಮಾಡಬಹುದು. ನೀವು ಮನೆಯಲ್ಲಿ ರೈನ್’ಬೋ ಡಯಟ್ ಅನ್ನು ಸುಲಭವಾಗಿ ತಯಾರಿಸಬಹುದು.
ರೈನ್’ಬೋ ಡಯಟ್ ಕಾಮನಬಿಲ್ಲಿನ ಎಲ್ಲಾ ಬಣ್ಣಗಳನ್ನು ಹೊಂದಿರುವ ಆಹಾರವನ್ನು ಒಳಗೊಂಡಿದೆ. ವಾಸ್ತವವಾಗಿ, ಪ್ರತಿಯೊಂದು ಹಣ್ಣು ಮತ್ತು ತರಕಾರಿಯು ಫೈಟೋನ್ಯೂಟ್ರಿಯಂಟ್ ಹೊಂದಿರುತ್ತದೆ, ಅದು ತರಕಾರಿಗಳಿಗೆ, ಹಣ್ಣುಗಳಿಗೆ ಬಣ್ಣವನ್ನು ನೀಡುತ್ತದೆ. ಆಹಾರದ ಪ್ರತಿಯೊಂದು ಬಣ್ಣವು ವಿಭಿನ್ನ ಆರೋಗ್ಯ ಪದಾರ್ಥಗಳಿಂದ ತುಂಬಿರುತ್ತದೆ. ಯಾವ ತರಕಾರಿ ಸೇವಿಸಿದರೆ ಏನು ಉಪಯೋಗ. 

ಹೆಚ್ಚಿನ ಶ್ರಮವಿಲ್ಲದೆ ಈ ರೈನ್ ಬೋ ಡಯಟ್ ನಿಂದ ಹೇಗೆ ಸುಲಭವಾಗಿ ಪೌಷ್ಟಿಕಾಂಶವನ್ನು ಪಡೆಯಬಹುದು ರೈನ್’ಬೋ ಡಯಟ್ ತಯಾರಿಸುವ ವಿಧಾನ ಯಾವುದು ಮತ್ತು ಯಾವ ರೋಗಗಳನ್ನು ಇದು ದೂರವಿಡುತ್ತವೆ ಎಂದು ತಿಳಿಯೋಣ.
 
ಕೆಂಪು ಹಣ್ಣುಗಳು:
ರೈನ್’ಬೋ ಡಯಟ್‌ನ ಕೆಂಪು ಬಣ್ಣದ ಆಹಾರಗಳು ಉರಿಯೂತಕ್ಕೆ ಶಮನಕಾರಿಯಾಗಿವೆ. ಅವು ಸಾಕಷ್ಟು ಉತ್ಕರ್ಷಣ ನಿರೋಧಕ ಗುಣ ಹೊಂದಿರುತ್ತವೆ, ಇದು ಹೃದ್ರೋಗ ಮತ್ತು ಕೆಲವು ಕ್ಯಾನ್ಸರ್ ಗಳ ಅಪಾಯವನ್ನು ನಿವಾರಿಸುತ್ತೆ. ಕೆಂಪು ಬಣ್ಣದ ಆಹಾರ ಸೇವಿಸುವುದರಿಂದ ಸೂರ್ಯನ ಬೆಳಕಿನಿಂದ ಚರ್ಮಕ್ಕೆ ಹಾನಿಯಾಗುವುದಿಲ್ಲ. ಟೊಮೆಟೊ, ಕಲ್ಲಂಗಡಿ, ಗುಲಾಬಿ ಪೇರಳೆ, ದ್ರಾಕ್ಷಿ, ಸೇಬು, ಸ್ಟ್ರಾಬೆರಿ ಇತ್ಯಾದಿಗಳು ಕೆಂಪು ಆಹಾರಗಳಾಗಿವೆ.
ಹಳದಿ ಮತ್ತು ಕಿತ್ತಳೆ ಆಹಾರಗಳು: 
ಹಳದಿ ಮತ್ತು ಕಿತ್ತಳೆ ಬಣ್ಣದ ಆಹಾರಗಳು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಇದು ಹೃದ್ರೋಗ ಮತ್ತು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಕ್ಯಾರೆಟ್, ಬಾಳೆಹಣ್ಣು, ಅನಾನಸ್, ಕುಂಬಳಕಾಯಿ, ಜೋಳದಿಂದ ರೈನ್‌ ಬೋ ಡಯಟ್ ನಲ್ಲಿ ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಸೇರಿಸಬಹುದು.
 

ಹಸಿರು ಆಹಾರ :ರೈನ್’ಬೋ ಡಯಟ್ ನಲ್ಲಿ ಹಸಿರು ಬಣ್ಣವು ಅತ್ಯಂತ ಮುಖ್ಯವಾಗಿದೆ. ಈ ಆಹಾರಗಳನ್ನು ಸೇವಿಸುವ ಮೂಲಕ, ದೇಹವು ಅಗತ್ಯವಾದ ಪ್ರೋಟೀನ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯುತ್ತದೆ. ಈ ವಿಷಯಗಳು ದೇಹವನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತವೆ. ನಮ್ಮಲ್ಲಿ ಸಾಕಷ್ಟು ಹಸಿರು ತರಕಾರಿಗಳಿವೆ. ಇದರಲ್ಲಿ ಪಾಲಕ್ ಸೊಪ್ಪು, ಬ್ರೊಕೋಲಿ, ಹಸಿರು ಎಲೆಕೋಸು, ಆವಕಾಡೊ, ಇತ್ಯಾದಿಗಳು ಸೇರಿವೆ.

ನೀಲಿ ಮತ್ತು ನೇರಳೆ ಆಹಾರ: 

ನೀಲಿ ಮತ್ತು ನೇರಳೆ ಆಹಾರಗಳು ಮೆದುಳನ್ನು ತೀಕ್ಷ್ಣ ಗೊಳಿಸುತ್ತವೆ. ಅವುಗಳನ್ನು ತಿನ್ನುವ ಮೂಲಕ, ಟೈಪ್ -2 ಮಧುಮೇಹ 
ನರವೈಜ್ಞಾನಿಕ ಅಸ್ವಸ್ಥತೆಗಳು, ಹೃದ್ರೋಗ ಮತ್ತು ಕೆಲವು ಕ್ಯಾನ್ಸರ್ ಗಳನ್ನು ದೂರವಿಡಬಹುದು. ಬೆರ್ರಿಗಳು, ಬದನೆಕಾಯಿಗಳು, ಕೆಂಪು-ನೇರಳೆ ಎಲೆಕೋಸು, ದ್ರಾಕ್ಷಿಗಳಲ್ಲಿ ನೀಲಿ ಮತ್ತು ನೇರಳೆ ಬಣ್ಣಗಳು ಕಂಡುಬರುತ್ತವೆ.

ಗಾಢ ಕೆಂಪು ಆಹಾರಗಳು:
ಗಾಢ ಕೆಂಪು ಬಣ್ಣದ ಆಹಾರಗಳು ದೇಹದಲ್ಲಿ ಆಮ್ಲಜನಕವನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರಗಳನ್ನು ಹೊಂದಿರುತ್ತದೆ. ಅವುಗಳನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಕ್ಯಾನ್ಸರ್ ದೂರವಿರುತ್ತದೆ. ಅಲ್ಲದೆ, ಗಾಢ ಕೆಂಪು ಆಹಾರಗಳು ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಬೀಟ್ ರೂಟ್ ಮತ್ತು ಪ್ರಿಸಿಲ್ಲಿ ಪಿಯರ್ ಗಳು ಗಾಢ ಕೆಂಪು ಆಹಾರಗಳಾಗಿವೆ.
ಈ ರೈನ್ ಬೋ ಡಯಟ್ ತುಂಬಾ ಸಿಂಪಲ್. ಯಾವುದೇ ನಿಯಮಗಳ ಪಾಲನೆಯಿಲ್ಲದೆ ಪಾಲಿಸಬಹುದಾದ ಅಲ್ಲದೆ ಈ ಆಹಾರಕ್ರಮ ಬಾಯಿಗೆ ಹಿತ, ದೇಹಕ್ಕೆ ತಂಪು. ದಿನನಿತ್ಯವೂ ಇದರಲ್ಲಿನ ಒಂದು ಅಂಶವಿರುವ ಒಂದೊಂದು ತರಕಾರಿ ಅಥವಾ ಹಣ್ಣನ್ನು ಸೇವನೆ ಮಾಡುತ್ತಾ ಬಂದರೆ ಆರೋಗ್ಯ ಸಮತೋಲನ ಕಾಯ್ದುಕೊಳ್ಳುತ್ತದೆ. ಶ್ರಮವೇ ಇಲ್ಲದೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

ವಿನುತಾ ಹೆಚ್.ಎಲ್                                                                                                            ಡಿಜಿಟಲ್‌ ಸಮಯ ನ್ಯೂಸ್‌

Post a comment

No Reviews