
ಸಾಕಷ್ಟು ಹಳ್ಳಿ ಮಂದಿ ನುಗ್ಗೆ ಮರದ ಎಲೆಗಳನ್ನು ಇಷ್ಟಪಡುತ್ತಾರೆ. ಅವುಗಳ ಜೊತೆಗೆ ಸಾಂಬಾರ್, ಚಟ್ನಿ, ಪಲ್ಯ ಮುಂತಾದ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಿ ತಿನ್ನುತ್ತಾರೆ. ನುಗ್ಗೆ ಸೊಪ್ಪು, ನುಗ್ಗೆಕಾಯಿ ಹಾಗೂ ಬೇರಿನಿಂದ ಸಿಗುವ ಪ್ರಯೋಜನಗಳೇನು ಗೊತ್ತಾ?
ನುಗ್ಗೆ ಸೊಪ್ಪು, ಕಾಯಿಗಳು, ತೊಗಟೆ, ಹೂವು, ಬೇರುಗಳು ಔಷಧಗಳ ತಯಾರಿಕೆಯಲ್ಲಿ ಉಪಯುಕ್ತವಾಗಿವೆ.
ಚರ್ಮದ ಆರೈಕೆ: ನುಗ್ಗೆ ಸೊಪ್ಪು ಮಂದ ತ್ವಚೆಯನ್ನು ಪುನರ್ಯೌವನಗೊಳಿಸುತ್ತದೆ. ಇದು ಚರ್ಮವನ್ನು ಯುವ ಮತ್ತು ಮೃದುವಾಗಿಸುತ್ತದೆ. ಅಲ್ಲದೇ ಆರೋಗ್ಯಕರ ಹೊಳಪನ್ನು ನೀಡುತ್ತದೆ. ನುಗ್ಗೆ ಸೊಪ್ಪಿನ ಪೇಸ್ಟ್ ಹಚ್ಚುವುದರಿಂದ ಮೊಡವೆ ಕಲೆಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ಬ್ಯೂಟಿಷಿಯನ್ಗಳು.
ಕೂದಲಿನ ಬೆಳವಣಿಗೆಗೆ ನುಗ್ಗೆ ಸೊಪ್ಪು, ಬೇರಿನ ರಸ ಕೂಡ ತುಂಬಾ ಸಹಕಾರಿಯಾಗಿದೆ. ಇದನ್ನು ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಕಡಿಮೆಯಾಗಿ ಕೂದಲು ದಟ್ಟವಾಗುತ್ತದೆ.
Tags:
Poll (Public Option)

Post a comment
Log in to write reviews