
ಜೀವನ ಶೈಲಿ ಬದಲಾದಂತೆ ರೋಗಗಳು ನಮ್ಮ ದೇಹವನ್ನು ಸುಲಭವಾಗಿ ಆಕ್ರಮಿಸಿಕೊಳ್ಳುತ್ತಿವೆ. ಜೀವನ ಶೈಲಿ ಬದಲಾದಂತೆ ಆಹಾರ, ನಿದ್ರೆಯ ಸಮಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಅದರ ಜೊತೆ ಅಸಿಡಿಟಿ ಇತ್ತೀಚಿನ ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ ಈ ಸಮಸ್ಯೆಯಿಂದ ಪಾರಾಗಲು ಈ ಸಲಹೆಯನ್ನ ಮಾಡಿ ನೋಡಿ.
ಒಂದು ಲೋಟ ನೀರಿನಲ್ಲಿ ಒಂದು ಚಮಚ ಸೊಂಪನ್ನು ಮತ್ತು ಒಂದು ಚಮಚ ಜೀರಿಗೆ ಬೆರಿಸಿ. ಇಡಿ ರಾತ್ರಿ ನೀರಿನಲ್ಲಿ ನೆನೆಯಲು ಬಿಡಿ. ಬೆಳಗ್ಗೆ ಈ ಮಿಶ್ರಣ ಮಾಡಿದ ನೀರನ್ನು ಐದು ನಿಮಿಷಗಳ ಕಾಲ ಕುದಿಸಿ ಉಗುರು ಬೆಚ್ಚಗಾದ ನಂತರ ಸೇವಿಸಿ ಅಥವಾ ನೀವು ಸೋಸದೆ ಸಹ ಕುಡಿಯಬಹುದು.
ಅತಿಯಾದ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ಇದ್ದರೆ ಖಂಡಿತಾ ಇದನ್ನು ಸೇವಿಸಿ ಇದರಿಂದ ನಿಮ್ಮ ಹೊಟ್ಟೆಯುಬ್ಬರ ಸಮಸ್ಯೆ ಕಡಿಮೆಯಾಗುತ್ತದೆ. ಗ್ಯಾಸ್ ಮತ್ತು ಅಸಿಡಿಟಿಯಿಂದಲೂ ಪರಿಹಾರ ದೊರೆಯುತ್ತದೆ.
Poll (Public Option)

Post a comment
Log in to write reviews