2024-12-24 06:24:57

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಯಾವುದೇ ಡಯಟ್, ವ್ಯಾಯಮ ಮಾಡದೇ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದಾದ ಮಾರ್ಗ

ತೂಕ ಇಳಿಸಲಿಕ್ಕಾಗಿ ಹಲವಾರು ಜನ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಅದಕ್ಕೆ ಅಂತಲ್ಲೇ ಉಪವಾಸ ಮಾಡುವವರಿದ್ದಾರೆ. ದೇಹ ದಂಡಿಸುವವರಿದ್ದಾರೆ. ಕೃತಕ ಮಾತ್ರೆ, ಔಷಧಗಳಿಗೆ ಮೊರೆ ಹೋಗುವವರೂ ಇದ್ದಾರೆ. ಆದ್ರೆ ಇದೆಲ್ಲ ಮಾಡಿದರು ಕೆಲವೊಮ್ಮೆ ಅಡ್ಡ ಪರಿಣಾಮಗಳಾಗುವ ಸಾಧ್ಯತೆಯೂ ಇದೆ ಹೀಗೆಂದು ಅತಿಯಾದ ಚಿಂತೆ ಬೇಡ ಯಾಕೆಂದರೆ ನಿಮ್ಮ ತೂಕವನ್ನು ಇಳಿಸಲು ಇಲ್ಲಿದೆ ಮನೆ ಮದ್ದು.

ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಹೋಳು ನಿಂಬೆ ಹಣ್ಣನ್ನು ಹಿಂಡಿ. ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. ಹೀಗೆ ಮಾಡುವುದರಿಂದ ನೀವು ತೂಕ ನಷ್ಟ ಹೊಂದಬಹುದು.

ತೂಕ ಇಳಿಕೆಗೆ ನಿಂಬೆ ಮತ್ತು ಜೇನು ಸಾಂಪ್ರದಾಯಿಕವಾದ ಪದ್ಧತಿಯಾಗಿದೆ. ಈ ಎರಡು ಪದಾರ್ಥಗಳು ಸಾಮಾನ್ಯವಾಗಿ ಮನೆಯಲ್ಲಿ ದೊರೆಯುತ್ತವೆ. ಇವು ಆಶ್ಚರ್ಯಕರವಾಗಿ ತೂಕವನ್ನು ಕಳೆದುಕೊಳ್ಳಲು ಇತರ ಮಾರುಕಟ್ಟೆಯಲ್ಲಿನ ಬ್ರ್ಯಾಂಡ್‌ಗಳಿಗಿಂತ ಪರಿಣಾಮಕಾರಿ. ವಾಸ್ತವವಾಗಿ, ನಿಂಬೆ ಮತ್ತು ಜೇನಿನ ಸಮ್ಮಿಶ್ರಣವು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಇದರಿಂದ ನಿಮ್ಮ ತೂಕವು ಕ್ರಮೇಣವಾಗಿ ಇಳಿಕೆಯಾಗುತ್ತದೆ

 

Post a comment

No Reviews