2024-12-24 07:36:22

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಡೆಲಿವರಿ ಬಾಯ್ ಕೆಲಸದಲ್ಲಿ ಜೊಮಾಟೊ ಸಿಇಒ; ಲಿಫ್ಟ್ ಬಳಸಲು ಬಿಡದ ಮಾಲ್ ಸೆಕ್ಯೂರಿಟಿ

ನವದೆಹಲಿ, ಅಕ್ಟೋಬರ್ 7: ಹಿಂದೆಲ್ಲಾ ರಾಜ ಮಹಾರಾಜರು ಸಾಮಾನ್ಯ ಪ್ರಜೆಯ ಹಾಗೆ ಮಾರುವೇಷ ಹಾಕಿಕೊಂಡು ತಮ್ಮ ನಾಡಿನ ಸಮಸ್ಯೆಗಳನ್ನು ತಿಳಿಯಲು ಯತ್ನಿಸುತ್ತಿದ್ದರು. ಕಾರ್ಪೊರೇಟ್ ಕಂಪನಿಗಳಲ್ಲೂ ಕೆಲ ಎಕ್ಸಿಕ್ಯೂಟಿವ್​ಗಳು ಇಂಥ ಕೆಲಸ ಮಾಡುವುದು ಇದೆ. ಕೆಫೆ ಕಾಫಿ ಡೇ ಸಂಸ್ಥಾಪಕರಾಗಿದ್ದ ದಿವಂಗತ ಸಿದ್ಧಾರ್ಥ್ ಹೆಗ್ಡೆ ಸಾಮಾನ್ಯರ ಹಾಗೆ ಯಾವುದಾದರೂ ಕಾಫಿ ಡೇ ಯೂನಿಟ್​ಗೆ ಹೋಗಿ ಕಾಫಿ ಕುಡಿದು ಬರುತ್ತಿದ್ದರಂತೆ. ಇಂಥವರ ಪಟ್ಟಿಗೆ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಅವರನ್ನೂ ಸೇರಿಸಬಹುದು. ಜೊಮಾಟೊ ಬಿಸಿನೆಸ್​ನ ಪ್ರಮುಖ ಭಾಗವಾಗಿರುವ ಡೆಲಿವರಿ ಬಾಯ್​ಗಳ ಕಷ್ಟ ಏನೆಂದು ಖುದ್ದಾಗಿ ತಿಳಿಯಲು ದೀಪಿಂದರ್ ಗೋಯಲ್ ತಾವೇ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದಾರೆ. ಈ ವೇಳೆ ಆದ ಕೆಲ ಅನುಭವಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಗುರುಗ್ರಾಮ್​ನ ಪ್ರತಿಷ್ಠಿತ ಏಂಬಿಯನ್ಸ್ ಮಾಲ್​ಗೆ ಹೋಗಿದ್ದಾಗಿನ ಒಂದು ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ತಮ್ಮ ಎರಡನೇ ಪತ್ನಿ ಗ್ರೇಷಿಯಾ ಮುನೋಜ್ ಜೊತೆ ಸೇರಿ ಡೆಲಿವರಿ ಬಾಯ್​ನಂತೆ ಏಂಬಿಯನ್ಸ್ ಮಾಲ್​ಗೆ ಹೋಗಿದ್ದರು. ಅಲ್ಲಿ ಹಲ್ದೀರಾಮ್ ಸ್ಟೋರ್​ನಿಂದ ಆರ್ಡರ್ ಕಲೆಕ್ಟ್ ಮಾಡಲು ಲಿಫ್ಟ್ ಅಥವಾ ಎಲಿವೇಟರ್ ಬಳಸಲು ಹೋಗುತ್ತಾರೆ. ಅಲ್ಲಿದ್ದ ಸೆಕ್ಯೂರಿಟಿಯವರು ತಡೆದು, ಮೆಟ್ಟಿಲುಗಳ ಮೂಲಕ ಹೋಗುವಂತೆ ಸೂಚಿಸುತ್ತಾರೆ.

ದೀಪಿಂದರ್ ಗೋಯಲ್ ಸ್ಟೇರ್ ಕೇಸ್ ಬಳಸಿ ಹಲ್ದೀರಾಮ್ಸ್ ಇದ್ದ 3ನೇ ಫ್ಲೋರ್​ಗೆ ಹೋಗುತ್ತಾರೆ. ಡೆಲಿವರಿ ಹುಡುಗರು ಸ್ಟೇರ್​ಕೇಸ್​ಗೆ ಮಾತ್ರ ಸೀಮಿತ ಇರಬೇಕು. ಮಾಲ್​ನೊಳಗೆ ಪ್ರವೇಶ ಇಲ್ಲ ಎನ್ನುವ ವಿಚಾರ ಜೊಮಾಟೊ ಸಿಇಒಗೆ ತಿಳಿಯುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಸ್ಟೇರ್​ಕೇಸ್​ನಲ್ಲಿ ಕೂತು ಇತರ ಡೆಲಿವರಿ ಬಾಯ್​ಗಳೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು

Post a comment

No Reviews