
ಶಿವಮೊಗ್ಗ: ಮೊಹಮದ್ ಜೈದಾನ್ ಎಂಬ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ತಲಾ 50 ಸಾವಿರ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ನೀಡಿದೆ.
2021 ರಲ್ಲಿ ಶಿವಮೊಗ್ಗ ಟೌನ್ ವಾದಿ-ಎ-ಹುದಾ ವಾಸಿ ಮಹಮ್ಮದ್ ಜೈದಾನ್ ಮತ್ತು ಶಿವಮೊಗ್ಗ ಟೌನ್ ಲಕ್ಷರ್ ಮೊಹಲ್ಲಾದ ವಾಸಿ ನಕೀ ಅಲಿ ಇಬ್ಬರ ನಡುವೆ ಕ್ಲುಲಕ ಕಾರಣಕ್ಕೆ ಜಗಳವಾಗಿತ್ತು. ಈ ಹಿನ್ನಲೆ ಜೈದಾನ್ ನ ತಂದೆ ನಜೀರ್ ಅಹಮದ್ ಅವರು ಮಗನ ರಕ್ಷಣೆಗಾಗಿ ಬಾಪೂಜಿ ನಗರದಿಂದ ವಾದಿ ಎ ಹುದಾ ಬಡಾವಣೆಗೆ ಸ್ಥಳಾಂತರಗೊಂಡಿದ್ದರು.
ಆದರೆ ಆರೋಪಿಗಳು 2021 ನೇ ಇಸವಿಯ ಅಕ್ಟೊಬರ್ 29 ರಂದು ರಾತ್ರಿ ಶಿವಮೊಗ್ಗ ಟೌನ್ ಬಳಿ ಅಟ್ಯಾಕ್ ಮಾಡಿದ್ದರು . ಮತ್ತು ಮಹಮ್ಮದ್ ಅಬು ಸ್ವಲೇಹ ಇಬ್ಬರೂ ಸೇರಿಕೊಂಡು ಮಹಮ್ಮದ್ ಜೈದಾನ್ ನ ಮೇಲೆ ಹರಿತವಾದ ಆಯುಧಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಈ ಬಗ್ಗೆ ಮೃತನ ತಂದೆ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದಲ್ಲಿ ಆಗಿನ ತನಿಕಾಧಿಕಾರಿಗಳಾದ ದೀಪಕ್ ಎಂ.ಎಸ್, ಪೊಲೀಸ್ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
Poll (Public Option)

Post a comment
Log in to write reviews