ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಯೂಟ್ಯೂಬರ್ ರಜನಿ ಪಾತ್ರ ಪತ್ತೆ : ರೋಚಕ ಸತ್ಯ ಬಯಲು

ಬೆಂಗಳೂರು : ರೇಣುಕಾ ಮರ್ಡರ್ ಕೇಸ್‌ನ ಮತ್ತೊಂದು ರಣ ರೋಚಕ ಸತ್ಯ ಬಯಲಾಗಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಯೂಟ್ಯೂಬರ್ ರಜನಿ ಪಾತ್ರ ಪತ್ತೆಯಾಗಿದ್ದು, ಪೊಲೀಸ್ ರಿಮ್ಯಾಂಡ್ ಅರ್ಜಿಯಲ್ಲಿ ಯಾರೂ ಊಹಿಸದ ಸೀಕ್ರೆಟ್ ಇದೀಗ ಬಹಿರಂಗವಾಗಿದೆ.
ಮೊಟ್ಟ ಮೊದಲ ಬಾರಿಗೆ ದರ್ಶನ್ ಕೇಸ್‌ನಲ್ಲಿ ಅಭಿಮಾನಿಗಳ ಕೈವಾಡವೂ ಇದೆ ಅನ್ನೋದು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖವಾಗಿದೆ. ದರ್ಶನ್ ಅಭಿಮಾನಿಗಳ ಹೇಳಿಕೆ ಕೂಡಾ ಕಾನೂನು ಬಾಹಿರವಾಗಿದ್ದು, ಯೂಟ್ಯೂಬರ್ ರಜಿನಿ ಸೇರಿ ಪುಂಡ ಅಭಿಮಾನಿ ಬಳಗ ಈ ಕೇಸ್‌ನಲ್ಲಿ ಫಿಟ್ ಆಗೋದು ಗ್ಯಾರಂಟಿಯಾಗಿದೆ. ಪೈಶಾಚಿಕ ಕೃತ್ಯಕ್ಕೆ ಅಭಿಮಾನಿ ಬಳಗವನ್ನು ಬಳಸಿರೋದು ಪತ್ತೆಯಾಗಿದ್ದು, ರಜಿನಿ ಸೇರಿ ಪುಂಡ ಅಭಿಮಾನಿಗಳ ಪ್ರಚೋದನೆಯಿಂದಲೇ ಈ ಪೈಶಾಚಿಕ ಕೃತ್ಯ ನೆಡೆದಿದೆ.
ಅಭಿಮಾನಿಗಳನ್ನು ಬಳಸಿಕೊಂಡು ಮರ್ಡರ್ ಮಾಡಿರೋದಕ್ಕೆ ಸಾಕ್ಷಿ ಸಿಕ್ಕಿದೆ. ಪ್ರಕರಣದ ತನಿಖೆಗೆ ದರ್ಶನ್ ಆಭಿಮಾನಿಗಳು ಅಡ್ಡಿಪಡಿಸುತ್ತಿದ್ದಾರೆ. ಬೆದರಿಸುವ ಹೇಳಿಕೆ ಕೊಡ್ತಿರೋ ದರ್ಶನ್ ಅಭಿಮಾನಿಗಳಿಗೂ ಇದೀಗ ಜೈಲು ವಾಸ ಕಾದಿದೆ. ದರ್ಶನ್ ತನ್ನ ಅಭಿಮಾನಿಗಳನ್ನೇ ಬಳಸಿ ಸಾಕ್ಷ್ಯ ಮಾಡ್ಬಬಹುದು ಎಂದು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖವಿದೆ. ಅಷ್ಟೇ ಅಲ್ಲದೆ ಪೊಲೀಸ್ ರಿಮ್ಯಾಂಡ್ ಅರ್ಜಿಯಲ್ಲಿ ದರ್ಶನ್ ಅಭಿಮಾನಿಗಳ ರೌಡಿಸಂ ಉಲ್ಲೇಖವಿದ್ದು, ಪೊಲೀಸರು ಕೋರ್ಟ್ ಮುಂದೆ ರೌಡಿ ದರ್ಶನ್ ಅಭಿಮಾನಿಗಳ ಮುಖವಾಡ ಕಳಚಿದ್ದಾರೆ.
Poll (Public Option)

Post a comment
Log in to write reviews