ಅಪ್ರಾಪ್ತ ಬಾಲಕಿಯನ್ನು ಮದುವೆಮಾಡಿಕೊಡುವಂತೆ ಒತ್ತಾಯಿಸಿದ ಯುವಕರ ಹತ್ಯೆ : ಬೆಳಗಾವಿ

ಅಪ್ರಾಪ್ತ ಮಗಳ ಜೊತೆ ಮದುವೆ ಮಾಡಿಕೊಡುವಂತೆ ಯುವಕರಿಬ್ಬರು ಸೇರಿ ಬಾಲಕಿಯ ತಂದೆಯನ್ನು ಒತ್ತಾಯಿಸಿದ್ದಾರೆ. ಬಾಲಕಿಯ ತಂದೆ ಸಹೋದರರಿಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ದುಂಡನಕೊಪ್ಪ ಗ್ರಾಮದಲ್ಲಿ ಮೇ 7 ರಾತ್ರಿ ನಡೆದಿದೆ.
ಆರೋಪಿ ಫಕೀರಪ್ಪನ ಅಪ್ರಾಪ್ತ ಪುತ್ರಿಯನ್ನು 20 ವರ್ಷದ ಮಾಯಪ್ಪ ಪದೇ ಪದೆ ಪೀಡಿಸುತ್ತಿದ್ದನಂತೆ. ಇದರಿಂದ ಆಕ್ರೋಶಗೊಂಡ ಫಕೀರಪ್ಪ, ಮಾಯಪ್ಪನಿಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಜಗಳ ಬಿಡಿಸಲು ಬಂದ ಮಾಯಪ್ಪನ ಸಹೋದರ 22 ವರ್ಷದ ಯಲ್ಲಪ್ಪನಿಗೂ ಚಾಕುವಿನಿಂದ ಇರಿದು ಫಕೀರಪ್ಪ ಪರಾರಿಯಾಗಿದ್ದ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಯಲ್ಲಪ್ಪನನ್ನು ಕೂಡಲೇ ಗ್ರಾಮಸ್ಥರು ಮತ್ತು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಸ್ಪಂದಿಸದೆ ಮೇ 8 ರಂದು ಯಲ್ಲಪ್ಪ ಕೂಡ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರ್ಗದಿಂ
ಸ್ಥಳಕ್ಕೆ ರಾಮದುರ್ಗ ಡಿವೈಎಸ್‌ಪಿ ಹಾಗೂ ಮುರಗೋಡ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರೋಪಿ ಫಕೀರಪ್ಪನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಈ ಬಗ್ಗೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tags:
Poll (Public Option)

Post a comment
Log in to write reviews