
ನೌಕರಿ ಸಿಗದ ಕಾರಣಕ್ಕೆ ಯುವಕನೊಬ್ಬಆತ್ಮಹತ್ಯೆ ಮಾಡಿಕೊಂಡ್ದಾನೆ. (21) ಸುಹಾಸ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಜೆ.ಪಿ.ನಗರದಲ್ಲಿ ವಾಸವಾಗಿದ್ದ ಸುಹಾಸ್ ನಗರದ ಖಾಸಗಿ ಕಾಲೇಜ್‌ನಲ್ಲಿ ಪದವಿ ವ್ಯಾಸಂಗ ಮುಗಿಸಿಕೊಂಡಿದ್ದ. ಎಷ್ಟೇ ಪ್ರಯತ್ನಿಸಿದ್ದರೂ ಕ್ಯಾಂಪಸ್ ಸೆಲೆಕ್ಷನ್ ಅಲ್ಲಿ ಉದ್ಯೋದ ದೊರಕಿರಲಿಲ್ಲ. ಈತನ ಸ್ನೇಹಿತರಿಗೆ ಉದ್ಯೋಗ ಸಿಕ್ಕಿತ್ತು. ಇದರಿಂದ ಖಿನ್ನತೆಗೊಳಗಾಗಿ ಸುಹಾಸ್ ಸಾಯುವ ನಿರ್ಧಾರಕ್ಕೆ ಬಂದಿದ್ದ ಎನ್ನಲಾಗಿದೆ. ಇದರಂತೆ ಇಂದು ವೆಗಾಸಿಟಿ ಮಾಲ್ಗೆ ಬಂದು ನಂತರ ನಾಲ್ಕನೇ ಮಹಡಿಗೆ ಹೋಗಿ ಅಲ್ಲಿಂದ ಜಿಗಿದಿದ್ದಾನೆ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಸುಹಾಸ್ ಪ್ರಾಣ ಕಳೆದುಕೊಂಡಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Poll (Public Option)

Post a comment
Log in to write reviews