
ಹೊಳೆಯುವ ಕಣ್ಣುಗಳ ಕೆಳಗೆ ಕಪ್ಪಾಗಿದ್ದರೆ, (ಡಾರ್ಕ್ ಸರ್ಕಲ್) ಆ ಕಣ್ಣು ಅಷ್ಟು ಅಂದವಾಗಿ ಕಾಣಲಾರದು. ಚಿಂತೆಗೊಳ್ಳಬೇಡಿ ಕಣ್ಣಿನ ಕೆಳಗೆ ಕಪ್ಪಾಗುವ ಸಮಸ್ಯೆ ಮಹಿಳೆಯರಿಗಷ್ಟೇ ಅಲ್ಲದೆ ಪುರುಷರಲ್ಲೂ ಕಂಡು ಬರುತ್ತದೆ. ಈ ಸಮಸ್ಯೆಗೆ ಪರಿಹಾರ ಇಲ್ಲಿದೆ ನೋಡಿ.
ತಾಜಾ ಸೌತೆಕಾಯಿಯನ್ನು ದಪ್ಪ ಹೋಳುಗಳಾಗಿ ಕತ್ತರಿಸಿ ನಂತರ 20ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿ ತಣ್ಣಗಾಗಲು ಬಿಡಿ. ನಂತರ ಅದಕ್ಕೆ ಸ್ಕ್ರಬ್ಬರ್ ಅನ್ನು ಹಾಕಿ ಮಸಾಜ್ ಮಾಡಿ ನಂತರ ಸೌತೆಕಾಯಿಯ ಹೊಳನ್ನ ಕಣ್ಣುಗಳ ಮೇಲೆ 10 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ತದನಂತರ ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ಕಣ್ಣುಗಳನ್ನು ತೊಳೆಯಿರಿ. ಈ ವಿಧಾನವನ್ನು ದಿನಕ್ಕೆ 1 ಬಾರಿ ಮಾಡುವುದರಿಂದ ನಿಮ್ಮ ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಣೆಯಾಗುತ್ತದೆ.
Poll (Public Option)

Post a comment
Log in to write reviews