
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್‌ಗೆ ಮಗ ವಿನೀಶ್ ಯಾವತ್ತಿಗೂ ನೀವೇ ನನ್ನ ಹೀರೋ ಎಂದು ಭಾವುಕವಾಗಿ ಪೋಸ್ಟ್ ಮಾಡುವ ಮೂಲಕ ಅಪ್ಪಂದಿರ ದಿನದ ಶುಭಾಶಯ ತಿಳಿಸಿದ್ದಾರೆ.
ತಂದೆಯೊಂದಿಗೆ ಅತಿಯಾದ ಬಾಂದವ್ಯ ಹೊಂದಿರುವ ವಿನೀಶ್, ಪೊಲೀಸ್ ಠಾಣೆಯಲ್ಲಿರುವ ತನ್ನ ತಂದೆ ದರ್ಶನ್‌ಅನ್ನು ನೆನಪಿಸಿಕೊಂಡು ತಾಯಿ ವಿಜಯಲಕ್ಷ್ಮಿ ಹಾಗೂ ತಂದೆ ದರ್ಶನ್ ಜೊತೆಗಿನ ವಿಶೇಷವಾದ ಫೋಟೋಗಳನ್ನು ಹಂಚಿಕೊಂಡು ನಿಮ್ಮನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಐ ಲವ್ ಯು, ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ.
Poll (Public Option)

Post a comment
Log in to write reviews