
ಪ್ರಧಾನಿ ನರೇಂದ್ರ ಮೋದಿ ಮಹಾಭಾರತದ ಶ್ರೀ ಕೃಷ್ಣನಂತೆ. ದೇಶದ್ರೋಹಿ ಪ್ರತಿಪಕ್ಷದಲ್ಲಿರುವ ದುರ್ಯೋಧನ, ದುಶ್ಯಾಸನರನ್ನು ಸಂಹರಿಸುವ ಕಾಯಕಕ್ಕೆ ಮಾರ್ಗದರ್ಶಿಯಾಗಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಯೋಗಿ, ಪ್ರಸ್ತುತ ನಡೆಯುತ್ತಿರುವುದು ರಾಮಭಕ್ತರು ಮತ್ತು ರಾಮದ್ರೋಹಿಗಳ ನಡುವಿನ ಸಮರ. ಇತಿಹಾಸದಂತೆ ಈಗಲೂ ರಾಮದ್ರೋಹಿಗಳು ಸೋಲುವುದು ಖಚಿತ.
ಕಾಂಗ್ರೆಸ್ ಎಸ್ಪಿ ಆಡಳಿತಾವಧಿಯಲ್ಲಿ ರಾಮಭಕ್ತರ ಮೇಲೆ ಭಯೋತ್ಪಾದನಾ ದಾಳಿ ನಡೆಯಿತು. ಆದರೂ ಇಂದು ರಾಮಲಲ್ಲಾ, ಭವ್ಯ ಮಂದಿರದಲ್ಲಿ ಇದ್ದಾನೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.
Poll (Public Option)

Post a comment
Log in to write reviews