
ಮೊದಲು ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೋಟ್ಯಂತರ ಭಕ್ತರು ತಿರುಪತಿಗೆ ತೆರಳುತ್ತಾರೆ. ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬು ಬಳಸುತ್ತಿದ್ದಾರೆ ಎಂಬ ಹೇಳಿಕೆ ಕೇವಲ ರಾಜಕೀಯ ಟೀಕೆ ಅಲ್ಲ. ಗುಜರಾತ್ನಲ್ಲಿ ಪರೀಕ್ಷಿಸಲಾಗಿದ್ದು, ಕೊಬ್ಬು ಬಳಸಿರುವುದು ದೃಢಪಟ್ಟಿದೆ. ಸನಾತನ ಧರ್ಮ ನಿರ್ಮೂಲನೆಗೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ತಿಮ್ಮಪ್ಪನ ಸನ್ನಿಧಿಯಲ್ಲಿ ಘಟನೆ ನಡೆದಿರೋದು ಆಘಾತ ತಂದಿದೆ. ತಪ್ಪು ಮಾಡಿರುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಎಂದು ಒತ್ತಾಯಿಸಿದರು.
ಈಗಾಗಲೇ ತಿರುಪತಿ ಸುತ್ತಮುತ್ತ ಚರ್ಚ್ ಮಾಡಿದ್ದಾರೆ. ತಿರುಪತಿ ದೇಗುಲದ ಆಡಳಿತ ಮಂಡಳಿ ಹಿಂದೂಗಳ ಕೈಯಲ್ಲಿರಬೇಕು. ಇಡೀ ತಿರುಪತಿ ದೇವಸ್ಥಾನ ಶುದ್ಧಿಗೊಳಿಸಬೇಕು. ಸನಾತನ ಹಿಂದೂ ಧರ್ಮದವರ ಭಾವನೆ ಜೊತೆ ಆಟವಾಡಿ ಮೋಸ ಮಾಡಿದ್ದಾರೆ. ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ಈ ಪ್ರಕರಣವನ್ನು ಇಲ್ಲಿಗೆ ಬಿಡಬಾರದು ಇದಕ್ಕೆ ಕೊನೆಗಣಿಸಬೇಕು ಎಂದರು.
Poll (Public Option)

Post a comment
Log in to write reviews