
ಮೈಸೂರು: ಸರ್ಕಾರಿ ಹುದ್ದೆ ಕೊಡಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಕೆ.ಸೋಮಯ್ಯ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿರುವ ಪ್ರಥಮ ದರ್ಜೆ ಸಹಾಯಕ ಹುದ್ದೆಯನ್ನು ತಮ್ಮ ಮಗಳಿಗೆ ಕೊಡಿಸುವುದಾಗಿ ಶ್ರೀರಾಂಪುರ ಗ್ರಾಮ ಪಂಚಾಯಿತಿ ಸದಸ್ಯೆ ಕಮಲಾಕ್ಷಿಅವರಿಂದ 2021 ರಲ್ಲಿ 7 ಲಕ್ಷ ಪಡೆದಿದ್ದಾನೆ. ಅಲ್ಲದೆ, ಶಾಂತಕುಮಾರಿ ಎಂಬುವವರ ಬಳಿ ಮಗನಿಗೆ ಕೆಲಸ ಕೊಡಿಸುವುದಾಗಿ 10 ಲಕ್ಷ , ಕಾಂತರಾಜು ಎಂಬುವನ ಹತ್ತಿರ 3 ಲಕ್ಷ, ನಾಗೇಂದ್ರ ಎಂಬುವರ ಬಳಿ ಮಗನ ಕೆಲಸಕ್ಕಾಗಿ ಎರಡು ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ. ಇದಲ್ಲದೆ ಕಚೇರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೆಲಸ ನೀಡಿದ್ದಾನೆ ಎನ್ನಲಾಗಿದೆ. ಈ ರೀತಿ ವಂಚನೆಗೆ ಒಳಗಾದ ಜನರು ವಿಜಯನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಮೇರೆಗೆ ವಂಚನೆ ಸಂಬಂಧ 9 ಎಫ್ಐಆರ್ ದಾಖಲಾಗಿದೆ.
Poll (Public Option)

Post a comment
Log in to write reviews