
ನವದೆಹಲಿ: ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮಹಿಳಾ ಟಿ-20 ವಿಶ್ವಕಪ್ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ತಂಡದ ವಿರುದ್ಧ ಹೀನಾಯ ಸೋಲಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್, 20 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 160 ರನ್ ಕಲೆಹಾಕಿತ್ತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 19 ಓವರ್ಗೆ ಕೇವಲ 102 ರನ್ಗಳಿಸಿ ಆಲ್ ಔಟ್ ಆಯಿತು. ಈ ಮೂಲಕ 58 ರನ್ಗಳ ಭಾರೀ ಅಂತರದಿಂದ ಹೀನಾಯ ಸೊಲನುಭವಿಸಿತು.
ಟೀಂ ಇಂಡಿಯಾ ಪರ ಸ್ಮೃತಿ ಮಂದಾನ (12), ಕ್ಯಾಪ್ಟನ್ ಕೌರ್ (15), ಜೆಮೈ ರೋಡ್ರಿಗೆಸ್ (13), ರಿಚಾ ಘೋಷ್ (12), ದೀಪ್ತಿ ಶರ್ಮಾ (13) ರನ್ಗಳಿಸಿದರು. ಟಾಪ್ ಆರ್ಡರ್ ಬ್ಯಾಟರ್ಸ್‌ಗಳ ವೈಫಲ್ಯದಿಂದ ಭಾರತ ತಂಡ ಮೊದಲ ಪಂದ್ಯವನ್ನು ಸೋಲಬೇಕಾಯಿತು.
ಇನ್ನು ಬೌಲರ್‌ಗಳಾದ ರೇಣುಕಾ ಸಿಂಗ್ 2 ವಿಕೆಟ್ ಪಡೆದರೆ, ಅರುಂಧತಿ ರೆಡ್ಡಿ ಹಾಗೂ ಶೋಭನಾ ತಲಾ ಒಂದು ವಿಕೆಟ್ ಪಡೆದುಕೊಂಡರು. ಶ್ರೇಯಾಂಕಾ ಪಾಟೀಲ್ ಯಾವುದೇ ವಿಕೆಟ್ ಪಡೆದುಕೊಂಡಿರಲಿಲ್ಲ. ನಾಳೆ ಪಾಕಿಸ್ತಾನದ ವಿರುದ್ಧ ಸೆಣೆದಾಡಲಿದ್ದು ಎನಾಗಲಿದೆ ಎಂದು ಎದುರುನೋಡಬೇಕಿದೆ.
Poll (Public Option)

Post a comment
Log in to write reviews