
ಹೈದರಾಬಾದ್: ರಿಯಲ್ ಎಸ್ಟೇಟ್ ಮಾರಾಟಗಾರ ಮತ್ತು ಆತನ ಸಹಾಯಕರು ಮಹಿಳೆಯೊಬ್ಬರಿಗೆ ತಂಪು ಪಾನೀಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಜನಾರ್ದನ್ ಮತ್ತು ಸಂಗ ರೆಡ್ಡಿ ದೌರ್ಜನ್ಯ ನಡೆಸಿದ ಆರೋಪಿಗಳಾಗಿದ್ದು, ಮಹಿಳೆ ನೀಡಿದ ದೂರಿನ ಮೇರೆಗೆ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಿಯಾಪುರಕ್ಕೆ ಭೇಟಿ ನೀಡಿದ್ದು ನಂತರ ಯಾದಗಿರಿಗುಟ್ಟಕ್ಕೆ ಭೇಟಿ ನೀಡಲು ಇಬ್ಬರು ತನ್ನನ್ನು ಕರೆದುಕೊಂಡು ಹೋಗಿದ್ದರು ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ರಾತ್ರಿ ಹಿಂತಿರುಗುವಾಗ, ಅವರು ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕಾರು ನಿಲ್ಲಿಸಿ, ಕಾರು ಕೆಟ್ಟುಹೋಗಿದೆ ಎಂದರು. ನಂತರ ಇಬ್ಬರು ಪುರುಷರು ಅವಳಿಗೆ ಆಹಾರ ನೀಡಿದರು, ಅವಳು ನಿರಾಕರಿಸಿದ್ದರಿಂದ ಅಂತಿಮವಾಗಿ ಆಕೆಗೆ ತಂಪು ಪಾನೀಯವನ್ನು ಕುಡಿಯಲು ಮನವೊಲಿಸಿದ್ದಾರೆ. ಅದನ್ನು ಕುಡಿದು ಅವಳಿಗೆ ತಲೆತಿರುದಂತಾಗಿದೆ.
ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡ ಅರೋಪಿಗಳು ಕಾರಿನಲ್ಲಿಯೇ ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಆಕೆಗೆ ಥಳಿಸಿ ಮಿಯಾಪುರದ ಹಾಸ್ಟೆಲ್‌ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಪೊಲೀಸರು ಅತ್ಯಾಚಾರ ಮತ್ತು ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Poll (Public Option)

Post a comment
Log in to write reviews