
ಜಾರ್ಖಂಡ್: ಪಡಿತರ ನೀಡುತ್ತಿಲ್ಲ ಎನ್ನುವ ಕೋಪದಲ್ಲಿ ಮಹಿಳಾ ಅಧಿಕಾರಿಯ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.
ಕಳೆದ ನಾಲ್ಕು ತಿಂಗಳಿಂದ ಪಡಿತರ ವಿತರಣೆ ಮಾಡಿಲ್ಲ ಎನ್ನುವ ಕೋಪಕ್ಕೆ ಸ್ಥಳೀಯರು ಮಹಿಳಾ ಅಧಿಕಾರಿ ಕುತ್ತಿಗೆಗೆ ಚಪ್ಪಲಿಹಾರ ಹಾಕಿ ಅಸಭ್ಯಯವಾಗಿ ನಡೆದುಕೊಂಡಿರುವ ಘಟನೆ ಗೋಪೋಕಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಧುಬನ್ ಗ್ರಾಮದಲ್ಲಿ ನಡೆದಿದೆ.
ಘಟನೆ ಕುರಿತು ಮಾತನಾಡಿ ಗೋಪೋಕಂದರ್ ಪೊಲೀಸ್ ಠಾಣೆಯ ಉಸ್ತುವಾರಿ ರಂಜಿತ್ ಮಂಡಲ್, ಗ್ರಾಮಸ್ಥರು ತಮ್ಮ ಪ್ರತಿಭಟನೆಯ ಭಾಗವಾಗಿ ಗೋವಿಂದಪುರ-ಸಾಹೇಬ್‌ಗಂಜ್ ರಾಜ್ಯ ಹೆದ್ದಾರಿಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ತಡೆದಿದ್ದರು. ನಂತರ ಫಲಾನುಭವಿಗಳನ್ನು ಸಮಾಧಾನ ಪಡಿಸಿ ಮಂಗಳವಾರ ಪಡಿತರ ವಿತರಿಸುವುದಾಗಿ ಭರವಸೆ ನೀಡಿ ರಸ್ತೆ ತಡೆ ಹಿಂಪಡೆಯಲಾಯಿತು ಎಂದರು.
ಸ್ಥಳೀಯ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಗೌತಮ್ ಮೋದಿ ಮಾತನಾಡಿ, ವಿತರಕರು ಮೇ ತಿಂಗಳಲ್ಲಿ ಶೇ 60ರಷ್ಟು ಮತ್ತು ಜೂನ್‌ನಲ್ಲಿ ಶೇ 7ರಷ್ಟು ಮಾತ್ರ ಆಹಾರಧಾನ್ಯಗಳನ್ನು ವಿತರಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಎಂದು ಹೇಳಿದ್ದಾರೆ.
Poll (Public Option)

Post a comment
Log in to write reviews