2024-09-19 09:06:53

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸ್ಕಾಮ್‌ ಮಾಡಿದ ಯುವಕನ ಜೊತೆ ಪ್ರೀತಿಗೆ ಬಿದ್ದ ಮಹಿಳೆ 

ಮಹಿಳೆಯೊಬ್ಬಳಿಗೆ ಲಕ್ಷಾಂತರ ರೂ ಮೋಸಮಾಡಿದ ವ್ಯಕ್ತಿಯ ಜೊತೆಗೆ ಮಹಿಳೆ  ಪ್ರೀತಿಗೆ ಬಿದ್ದ ಅಪರೋಪದ ಘಟನೆ ದೆಹಲಿಯಲ್ಲಿ ನಡೆದಿದೆ. 
ಚೀನಾದ ಶಾಂಘೈ ಮೂಲದ ಮಹಿಳೆಗೆ ಆನ್ಲೈನ್‌ ಡೇಟಿಂಗ್‌ ಆಪ್‌ ಮೂಲಕ ಯುವಕನೊಬ್ಬ ಪರಿಚಯ ವಾಗಿದ್ದ. ಆದರೆ ಮಹಿಳೆಯಿಂದ ಆತ ಸುಮಾರು 11 ಲಕ್ಷಕ್ಕೂ ಅಧಿಕ ಹಣವನ್ನ ಮೋಸದಿಂದ ಪಡೆದುಕೊಂಡಿದ್ದಾನೆ. 

ಮೋಸ ಮಾಡಿದ್ದಾದರೂ ಹೇಗೆ
ಪ್ರಿಯಕರ  ಮಹಿಳೆಗೆ ನಿನ್ನಲ್ಲಿರುವ ಹಣವನ್ನು ಹೂಡಿಕೆ ಮಾಡು ಇದರಿಂದ ಹೆಚ್ಚಿನ ಆದಾಯ ಬರುತ್ತದೆ ಎಂದು ಆಕೆಯ ಮನ ಪರಿವರ್ತನೆ ಮಾಡಿದ್ದನು. ನಂತರ ನಾನು ಉತ್ತರ ಮಯಾನ್ಮಾರ್‌ ನ ಹಗರಣವೊಂದರಲ್ಲಿ ಸಿಕ್ಕಿಬಿದ್ದಿದ್ದೇನೆ ನೀನು ನನಗೆ ಹಣವನ್ನು ನೀಡಿದರೆ ನಿನ್ನ ಬಳಿ ಚೀನಾಗೆ ಬರಲು ಸಾಧ್ಯವಾಗುತ್ತದೆ ಎಂದು ಸುಳ್ಳನ್ನು ಹೇಳಿ ಆಕೆಗೆ ಲಕ್ಷ ಲಕ್ಷ ಹಣವನ್ನು ವಂಚನೆ ಮಾಡಿದ್ದನು.  ಆದರೆ ಆತನ ಪ್ರೀತಿಯಿಂದ ಕುರುಡಳಾಗಿದ್ದ ಮಹಿಳೆ  ಪ್ರಿಯಕರನ  ಎಲ್ಲಾ ಸೂಚನೆಗಳನ್ನು ಚಾಚು ತಪ್ಪದೆ ಅನುಸರಿಸುತ್ತಿದ್ದಳು. 
ನಂತರ ಇಬ್ಬರು ಪ್ರೇಮಿಗಳು ಸೇರಿ ಸ್ಕಾಮ್‌ ಮಾಡಲು ಶುರು ಮಾಡಿದರು  ನಗದು ಹಿಂಪಡೆಯುವಿಕೆ ಮತ್ತು ಕ್ರಿಪ್ಟೋಕರೆನ್ಸಿ ಪರಿವರ್ತನೆಗಳ ಮೂಲಕ ಹಣವನ್ನು ಸ್ವೀಕರಿಸಲು ಮತ್ತು ಲಾಂಡರ್ ಮಾಡಲು  ಮಹಿಳೆ ತನ್ನ ಬ್ಯಾಂಕ್ ಖಾತೆಯನ್ನು ಬಳಸುತ್ತಿದ್ದಳು.
ಆದರೆ ಕೊನೆಗೊಂದು ದಿನ ಇನ್ನೊಬ್ಬ ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಸ್ಕಾಮ್‌ ಮಾಡುತ್ತಿದ್ದ ಮಹಿಳೆಯನ್ನು ಕಳೆದ ವರ್ಷ ಸೆಪ್ಟೆಂಬರ್ 19 ರಂದು ಬಂಧಿಸಲಾಯಿತು. ಅವಳು  ತಾನು ಮಾಡಿದ  ಅಪರಾಧವನ್ನು ಒಪ್ಪಿಕೊಂಡಳು. ಅವಳು ಇಷ್ಟೆಲ್ಲಾ ಅಪರಾಧ ಮಾಡಿದ್ದರೂ ಅವಳು ಅಪರಾಧದಿಂದ  ಸ್ವಲ್ಪವೂ ಲಾಭವನ್ನು ಪಡೆಯಲಿಲ್ಲ. ಪಡೆಯದ ಕಾರಣ ಮತ್ತು, ಆಕೆಗೆ ಎರಡೂವರೆ ವರ್ಷಗಳ ಜೈಲು ಶಿಕ್ಷೆ, ಅದೇ ಅವಧಿಗೆ ಅಮಾನತುಗೊಳಿಸಲಾಯಿತು ಮತ್ತು 30,000 ಯುವಾನ್ ದಂಡ ವಿಧಿಸಲಾಯಿತು.
 

Post a comment

No Reviews