
ಕೊಪ್ಪಳ ಜಿಲ್ಲೆಯ ಪಟ್ಟಣದ ಐದನೇ ವಾರ್ಡ್ ನಲ್ಲಿ ಮಹಿಳೆಯರ ಸಾರ್ವಜನಿಕ ಶೌಚಾಲಯದ ಗೋಡೆ ಮೇ 17ರ ರಾತ್ರಿ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು ಇಬ್ಬರಿಗೆ ಗಾಯಗಳಾಗಿವೆ.
ಒಂದು ವಾರದಿಂದ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಮಳೆಯಾಗಿದ್ದರಿಂದ ಗೋಡೆ ಸಾಕಷ್ಟು ನೆಂದಿತ್ತು. ಆದ್ದರಿಂದ ಗೋಡೆ ಕುಸಿದಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ. ಮೃತ ಮಹಿಳೆ 34 ವರ್ಷದ ಬಾನು ಬೇಗಂ ಎಂದು ತಿಳಿದು ಬಂದಿದೆ. ಉಮಾ ಬಾಯಿ ಹಾಗೂ ಮಹಾದೇವಿ ಎಂಬುವರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಕುಷ್ಟಗಿ ತಹಶೀಲ್ದಾರ್ ರವಿ ಅಂಗಡಿ ಹಾಗೂ ಪೊಲೀಸರು ಭೇಟಿ ನೀಡಿದರು. ಶೌಚಾಲಯದ ಗೋಡೆ ಅಡಿ ಕಳಗೆ ಸಿಲುಕಿ ಬಿದ್ದವರನ್ನು ಜೆಸಿಬಿ ವಾಹನದ ಮೂಲಕ ಹೊರಗಡೆ ತೆಗೆಯಲಾಯಿತು.
Poll (Public Option)

Post a comment
Log in to write reviews