
ಹೆರಿಗೆ ಸಮಯದಲ್ಲಿ ಮಹಿಳೆಯೊಬ್ಬರು ಕೃಷ್ಣ ಶ್ರೀಕೃಷ್ಣನ ಮಂತ್ರವನ್ನು ಪಠಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೆರಿಗೆ ಸಮಯ ಎಂಬುದು ಮಹಿಳೆಯರಿಗೆ ಪುನರ್ಜನ್ಮವಿದ್ದಂತೆ. ಈ ಸಮಯದಲ್ಲಿ ಭಯ ಆತಂಕ ಎಲ್ಲವೂ ಇದ್ದೇ ಇರುತ್ತೆ. ಅದನ್ನು ಹೋಗಲಾಡಿಸಲು ಇಲ್ಲೊಬ್ಬರು ತಾಯಿ ತನ್ನ ಮಗು ಆರೋಗ್ಯಕರವಾಗಿ ಜನಿಸಲೆಂದು ಶ್ರೀ ಕೃಷ್ಣ ಸ್ತೋತ್ರವನ್ನು ಪಠಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಭಕ್ತಿಯ ಶಕ್ತಿ” ಎಂಬ ಶೀರ್ಷಿಕೆ ಹಾಕಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ತಾಯಿಯು ತಾನು ಹೆರಿಗೆಯ ಒತ್ತಡದಿಂದ ಹಾಗೂ ಭಯದಿಂದ ಮುಕ್ತಿಯನ್ನು ಪಡೆಯಲು ಹಾಗೂ ಮಗು ಆರೋಗ್ಯಕರವಾಗಿ ಹುಟ್ಟಲು “ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ..” ಎಂಬ ಶ್ರೀ ಕೃಷ್ಣನ ಸ್ತೋತ್ರವನ್ನು ಪಠಿಸಿದ್ದಾರೆ. ಶ್ರೀ ಕೃಷ್ಣನ ಆಶೀರ್ವಾದದಿಂದ ತಾಯಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Poll (Public Option)

Post a comment
Log in to write reviews