ಸೋಶಿಯಲ್ ಮೀಡಿಯಾ ಟ್ರೆಂಡಿಂಗ್
ವೈದ್ಯರ ಶಸ್ತ್ರಚಿಕಿತ್ಸೆಯ ಎಡವಟ್ಟಿನಿಂದಾಗಿ ವಿಲಿಯಂ ಬ್ರಿಯಾನ್ ನಿಧನ
ವೈದ್ಯರ ಶಸ್ತ್ರಚಿಕಿತ್ಸೆಯ ಎಡವಟ್ಟಿನಿಂದಾಗಿ 70 ವರ್ಷದ ವಿಲಿಯಂ ಬ್ರಿಯಾನ್ ನಿಧನರಾದ ಘಟನೆಯು ಫ್ಲೋರಿಡಾದ ಅಸೆನ್ಶನ್ ಸೇಕ್ರೆಡ್ ಹಾರ್ಟ್ ಎಮರಾಲ್ಡ್ ಕೋಸ್ಟ್ ಆಸ್ಪತ್ರೆಯಲ್ಲಿ ಸಂಭವಿಸಿದೆ. ಆಪರೇಷನ್‌ಗೆ ಕರೆದೊಯ್ದ ವೈದ್ಯರು ವಿಲಿಯಂ ಬ್ರಿಯಾನ್ ಅವರ ದೇಹದ ಅಂಗವಾದ ಸ್ಪ್ಮೀನ್ (Spleen) ತೆಗೆಯುವ ಬದಲು ಲಿವರ್ (Liver ) ತೆಗೆದು ಹಾಕಿದ್ದಾರೆ. ಆಗಸ್ಟ್ 19 ರಂದು, ವಿಲಿಯಂ ‘ಬಿಲ್’ ಬ್ರಿಯಾನ್ ಮತ್ತು ಅವರ ಪತ್ನಿ ಬೆವರ್ಲಿ ಅವರು ಆಗ ತಾನ ಹೊಸ ಮನೆಗೆ ಪ್ರವೇಶಿಸಿದ್ದರು. ಇದ್ದಕ್ಕಿದ್ದಂತೆ ಬಿಲ್ ದೇಹದ ಎಡಭಾಗದಲ್ಲಿ ನೋವು ಶುರುವಾಗಿದೆ. ನಂತರ ಅವರ ಡಾ. ಥಾಮಸ್ ಶಕ್ನೋವ್ಸ್ಕಿ ಬಳಿಗೆ ಹೊದರು. ಬ್ರಿಯಾನ್ ಅವರ ದೇಹದಲ್ಲಿ ಸ್ಪ್ಮೀನ್ ಸರಿಯಾಗಿ ಕೆಲಸ ಮಾಡದ ಕಾರಣ ದೇಹದಿಂದ ಸ್ಪ್ಮೀನ್ ಕಿತ್ತು ಹಾಕಬೇಕು ಎಂದು ಡಾಕ್ಟರ್ ಸಲಹೆ ನೀಡಿದರು. ಶಸ್ತ್ರಚಿಕಿತ್ಸೆಯಲ್ಲಿ ಸ್ಪ್ಮೀನ್ ಬದಲಿಗೆ ಯಕೃತ್ತನ್ನೇ ಕಿತ್ತು ಹಾಕಿದ್ದಾರೆ. ಇದೀಗ ಈ ಬಗ್ಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವ ಬ್ರಿಯಾನ್ ಅವರ ಪತ್ನಿ ಬೆವೆರ್ಲಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಕುಟುಂಬದ ವಕೀಲರ ಪ್ರಕಾರ ಆಪರೇಷನಲ್ಲಿ ಸ್ಪ್ಲಿನ್ ಬದಲಾಗಿ ಲಿವರ್ ಅನ್ನು ರಿಮೂವ್ ಮಾಡಿದ್ದರಿಂದಾಗಿ ಬ್ರಿಯಾನ್ ತೀರ್ವ ರಕ್ತಸ್ರ್ತಾವಕ್ಕೆ ಗುರಿಯಾಗಿ ಬಳಿಕ ಮೃತಪಟ್ಟರು ಎಂದು ಹೇಳಿಕೆ ನೀಡಿದ್ದಾರೆ. ಪಿತ್ತಜನಕಾಂಗವನ್ನು ಪೂರೈಸುವ ಪ್ರಮುಖ ನಾಳಗಳೂ ಸಂಪೂರ್ಣವಾಗಿ ಡ್ಯಾಮೇಜ್ ಆಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ. ಇನ್ನೂ ಅಚ್ಚರಿ ವಿಚಾರ ಅಂದರೆ ಡಾ. ಥಾಮಸ್ ಶಕ್ನೋವ್ಸ್ಕಿ ಅವರು ಈ ಹಿಂದೆ 2023ರಲ್ಲಿ ಇದೇ ರೀತಿಯ ತಪ್ಪನ್ನು ಮಾಡಿದ್ದರು ಎಂದು ತಿಳಿದು ಬಂದಿದೆ. ಆಗ ಅವರು ಮೂತ್ರಜನಕಾಂಗದ ಬದಲಿಗೆ ಮೇದೋಜ್ಜೀರಕ ಗ್ರಂಥಿಯ ಭಾಗವನ್ನು ತೆಗೆದುಹಾಕಿದ್ದರು ಎಂದು ವರದಿಯಾಗಿದೆ. ಆ ಘಟನೆಯು ಅಷ್ಟೂ ಸುದ್ದಿಯಾಗಿರಲಿಲ್ಲ.ಇದರಿಂದಾಗಿ ಡಾ. ಶಕ್ನೋವ್ಸ್ಕಿ ಅಸೆನ್ಶನ್ ಸೇಕ್ರೆಡ್ ಹಾರ್ಟ್ ಎಮರಾಲ್ಡ್ ಕೋಸ್ಟ್ ಆಸ್ಪತ್ರೆಯಲ್ಲಿ ಹಾಗೇ ತಮ್ಮ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದರು. ಆದರೀಗ ಡಾ. ಶಕ್ನೋವ್ಸ್ಕಿ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ. ಶಕ್ನೋವ್ಸ್ಕಿ ಇನ್ನು ಮುಂದೆ ಯಾವುದೇ ರೋಗಿಗಳಿಗೆ ಟ್ರೀಟ್‌ಮೆಂಟ್ ಕೊಡಬಾರದು ಎಂದು ಬೆವರ್ಲಿ ಒತ್ತಾಯಿಸುತ್ತಿದ್ದಾರೆ. ಈ ಡಾಕ್ಟರ್ ಮಾಡಿದ ತಪ್ಪುಗಳಿಂದಾಗಿ ಬೇರೆ ಯಾರೂ ಬಳಲಬಾರದು ಹಾಗೂ ಸಾಯಬಾರದು. ಆಸ್ಪತ್ರೆಯು ಕೂಡ ಡಾಕ್ಟರ್ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕಿತ್ತು. ಮುಂದಿನ ದುರಂತಗಳನ್ನು ತಡೆಯಲು ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ.
Post a comment
Log in to write reviews