
ಕೊಡಗು : ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಕುಶಾಲನಗರ ತಾಲೂಕಿನಲ್ಲಿ 2 ಕಾಡಾನೆಯ ಕಳೇಬರ ಪತ್ತೆಯಾಗಿದೆ. ಮಡಿಕೇರಿ ತಾಲೂಕಿನ ಹುಲ್ಲುಗಾವಲಿನಲ್ಲಿ ಪತ್ತೆಯಾದ ಕಾಡನೆಯ ಕಳೇಬರ ಅಂದಾಜು 40 ವಷ೯ದಾಗಿದ್ದು, ಕುಶಾಲನಗರ ತಾಲೂಕಿನ ತ್ಯಾಗತ್ತೂರಿನಲ್ಲಿ ಸಿಕ್ಕಿರುವ ಕಳೇಬರ 18 ವಷ೯ದ ಕಾಡಾನೆಯದ್ದಾಗಿದೆ, ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಹುಲ್ಲುಗಾವಲಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಕಾಡಾನೆ ಮತ್ತೊಂದು ಆನೆಯೊಂದಿಗೆ ಕಾದಾಡಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ತ್ಯಾಗತ್ತೂರಿನಲ್ಲಿ ಪತ್ತೆಯಾದ ಆನೆ ಕಾಲುಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Poll (Public Option)

Post a comment
Log in to write reviews