
ಬಾಗಲಕೋಟೆ: ಕ್ಯಾನ್ಸರ್ ನಿಂದ ಪತಿ ಸಾವನ್ನಪ್ಪಿದು ಶವವನ್ನು ಮನೆಯ ಒಳಗೆ ತರಬೇಡಿ ಎಂದು ಹೆಂಡತಿ ಆಗ್ರಹಿಸಿದ್ದಾಳೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಸೋಮವಾರಪೇಟೆಯ ಗುರು ಕಿತ್ತೂರ ಎಂಬುವರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ಈ ಕ್ಯಾನ್ಸರ್ ಗೆ ಹೆದರಿ ಪತಿಯ ಶವವನ್ನು ಪತ್ನಿ ಹಾಗೂ ಪತ್ನಿಯ ಕುಟುಂಬಸ್ಥರು ಮನೆಯೊಳಗೆ ತರಲು ಬಿಡದೆ ಅಮಾನವೀಯವಾಗಿ ವರ್ತಿಸಿದ್ದಾರೆ. ಬಳಿಕ ಸ್ಥಳೀಯರು ಮನೆಯ ಹೊರಗಿನ ವಿದ್ಯುತ್ ಕಂಬಕ್ಕೆ ಶವವನ್ನು ಆಧಾರವಾಗಿಸಿ ಕೂರಿಸಿದ್ದಾರೆ.
ಇದನ್ನು ಗಮನಿಸಿದ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ, ಗುರು ಕಿತ್ತೂರು ಅವರ ಪತ್ನಿ ಹಾಗೂ ಆಕೆಯ ಮನೆಯವರಿಗೆ ತಿಳುವಳಿಕೆ ಹೇಳಿದ ನಂತರ ಶವವನ್ನು ಮನೆಯಲ್ಲಿ ಕೂಡಿಸಲು ಅನುಮತಿ ನೀಡಿದರು. ಬಳಿಕ ಅಂತ್ಯಸಂಸ್ಕಾರ ನೆರವೇರಿತು.
Poll (Public Option)

Post a comment
Log in to write reviews