ಬೆಂಗಳೂರು : ಕೆಂಗೇರಿಯ ಎಸ್.ಎಂ.ವಿ ಲೇಔಟ್ನಲ್ಲಿ ಕೊರಿಯೋಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪತ್ನಿಯನ್ನು ಪತಿ ಕಿರಣ್ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಿನ್ನೆ(ಗುರುವಾರ) ಬೆಳಕಿಗೆ ಬಂದಿತ್ತು. ಇದೀಗ ಪೊಲೀಸರ ಮುಂದೆ ಪತ್ನಿ ನವ್ಯಾಶ್ರೀ ಕೊಲೆಗೆ ಅಸಲಿ ಕಾರಣವನ್ನು ಪಾಪಿ ಪತಿ ಬಿಚ್ಚಿಟ್ಟಿದ್ದಾನೆ.
ನವ್ಯಾಶ್ರೀ ತನ್ನ ಸ್ನೇಹಿತೆ ಐಶ್ವರ್ಯಳ ಜೊತೆ ಹೊರಗಡೆ ಪಾರ್ಟಿ ಮಾಡಿದ್ದಾಳೆ. ರಾತ್ರಿ 10 ಗಂಟೆ ಸುಮಾರಿಗೆ ಕಿರಣ್ ಮನೆಗೆ ಬಂದಿದ್ದಾನೆ. ನವ್ಯಾಶ್ರೀ ಇಲ್ಲದನ್ನ ನೋಡಿ ದೇವರ ಕೊಣೆಯಲ್ಲಿ ಅವಿತುಕೂತಿದ್ದ. ರಾತ್ರಿ ಹನ್ನೊಂದು ಮೂವತ್ತರ ಸುಮಾರಿಗೆ ಗೆಳತ್ತಿಜೊತೆಗೆ ಮನೆಗೆ ಬಂದಿದ್ದಳು ಗೆಳತಿ ಐಶ್ವರ್ಯ ನಿದ್ದೆಗೆ ಜಾರಿ ಮಲಗಿದ್ದಳು ಈ ಸಮಯದ್ದಲ್ಲಿ ನವ್ಯಶ್ರೀ ಹೊರಗೆ ಬಂದು ಗೆಳೆಯನೊಬ್ಬನ ಜೊತೆ ವಿಡಿಯೋ ಚಾಟಿಂಗ್ ಮಾಡ್ತಿದ್ದಳು.
ವಿಡಿಯೋ ಚಾಟಿಂಗ್ ಮಾಡ್ತಿದ್ದನ್ನು ನೋಡಿದ ಪತಿ ಕಿರಣ್ ಜಗಳ ಮಾಡಿದ್ದಾನೆ. ಇಬ್ಬರ ನಡುವೆ ಗಲಾಟೆಯಾಗಿದ್ದು ಬಳಿ ಚಾಕುವಿನಿಂದ ಪತ್ನಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಪತ್ನಿ ಪ್ರಾಣ ಹೋಗ್ತಿದ್ದಂತೆ ಕಿರಣ್ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನವ್ಯಾಶ್ರೀ ಸ್ನೇಹಿತೆ ಬೆಳಗ್ಗೆ ಎದ್ದು ಬರ್ಬರ ಹತ್ಯೆ ಕಂಡು ಬೆಚ್ಚಿ ಬಿದ್ದು ಪೊಲೀಸರಿಗೆ ಮಾಹಿತಿ ನೀಡಿ ದೂರು ನೀಡಿದ್ದಾಳೆ. ಇನ್ನು ನಾನೇ ಕೊಂದಿದ್ದು ಅಂತ ಕಿರಣ್ ತಪ್ಪೊಪ್ಪಿಕೊಂಡಿದ್ದಾನೆ.
Post a comment
Log in to write reviews