ನಾಳೆ ನಡಿಯೋ ಮತ ಎಣಿಕೆ ಪ್ರಕ್ರಿಯೆ ಬಗ್ಗೆ ಇಂಡಿ ಒಕ್ಕೂಟ ಆಕ್ಷೇಪ ಎತ್ತಿರೋದ್ಯಾಕೆ..?
ನಾಳೆ ನಡೆಯಲಿರುವ ಮತ ಎಣಿಕೆ ಪ್ರಕ್ರಿಯೆಗೆ ಆಕ್ಷೇಪ ಎತ್ತಿರುವ ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟ, ಕೇಂದ್ರ ಚುನಾವಣಾ ಆಯುಕ್ತರನ್ನ ಭೇಟಿಯಾಗಿ ಎಣಿಕೆ ಪ್ರಕ್ರಿಯೆ ಬದಲಿಸಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ.
ಇಂಡಿ ಮೈತ್ರಿಕೂಟದ ಆಗ್ರಹವೇನು :
• ಈ ಹಿಂದಿನ ಕ್ರಮದಂತೆ ಅಂಚೆ ಮತ ಎಣಿಕೆ ಮೊದಲು ಮಾಡಬೇಕು.
• ಅಂಚೆ ಮತ ಎಣಿಕೆ ನಂತರವೇ EVM ಮತ ಎಣಿಕೆ ಮಾಡಬೇಕು.
• ಮತ ಎಣಿಕೆ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು.
• ವಿವಿಪ್ಯಾಟ್ ಚೀಟಿಗಳ ಎಣಿಕೆ ಕುರಿತು ಖಚಿತ ಮಾಹಿತಿ ನಮ್ಮ ಏಜೆಂಟರ್ಗಳಿಗೆ ನೀಡಬೇಕು.
• ನಮ್ಮ ಬೂತ್ ಏಜೆಂಟ್ ಗಳ ಸಮ್ಮುಖದಲ್ಲಿಯೇ ಮತ ಎಣಿಕೆ ಪ್ರಕ್ರಿಯೆ ಆರಂಭಿಸಬೇಕು.
• ಚುನಾವಣಾ ಅಧಿಕಾರಿಗಳು ಮಾರ್ಗಸೂಚಿಗಳನ್ನು ಅನುಸರಿಸಬೇಕು.
ಮತ ಎಣಿಕೆ ಬಗ್ಗೆ ಇಂಡಿ ಮೈತ್ರಿಕೂಟ ಆಕ್ಷೇಪ ಎತ್ತಿರುವ ಮಧ್ಯೆಯೇ ಬಿಜೆಪಿ ಕೂಡಾ ಚುನಾವಣಾ ಆಯುಕ್ತರನ್ನು ಭೇಟಿಯಾಗಿ 3 ಬೇಡಿಕೆಗಳನ್ನು ಇಟ್ಟಿದೆ.
• ಮತ ಎಣಿಕೆ ವೇಳೆ ಸೂಕ್ತ ಭದ್ರತೆ ಕಲ್ಪಿಸಬೇಕು.
• ಪ್ರತಿಕ್ಷಣದ ಮಾಹಿತಿಯನ್ನುನಿಯಮಾನುಸಾರ ಪ್ರಕಟಿಸಬೇಕು .
• ಮತ ಎಣಿಕೆ ಪ್ರಕ್ರಿಯೆಗೆ ಅಡ್ಡಿಪಡಿಸುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕು.
ಇನ್ನು ಇಂದು ಕೇಂದ್ರ ಚುನಾವಣಾ ಆಯೋಗ ಮಹತ್ವದ ಸುದ್ದಿಗೋಷ್ಠಿ ಕರೆದಿದೆ. ಮುಖ್ಯ ಆಯುಕ್ತ ರಾಜೀವ್ ಕುಮಾರ್ ಸೇರಿ ಮೂವರು ಆಯುಕ್ತರು ಉಪಸ್ಥಿತರಿರಲಿದ್ದಾರೆ. ಮತ ಎಣಿಕೆ ಸಿದ್ದತೆಗಳು, ಭದ್ರತೆ, ಫಲಿತಾಂಶ ಪ್ರಕಟಿಸುವ ವಿಧಾನ, ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಜೊತೆಗೆ ವಿವಿಧ ಪಕ್ಷಗಳು ಮತ ಎಣಿಕೆ ಪ್ರಕ್ರಿಯೆ ಬಗ್ಗೆ ಸಲ್ಲಿರುವ ದೂರುಗಳು, ಅವುಗಳ ಬಗ್ಗೆ ಆಯೋಗ ತೆಗೆದುಕೊಂಡ ಕ್ರಮಗಳ ಕುರಿತು ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
Post a comment
Log in to write reviews