2024-09-19 04:39:14

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಯಾರ ಮುಡಿಗೆ ಈ ಬಾರಿ ವರ್ಲ್ಡ್‌ ಕಪ್

ಟಿ 20 ವಿಶ್ವಕಪ್‌ ಇಂದಿನಿಂದ ಆರಂಭವಾಲಿದ್ದು ವಿಶ್ವಾದ್ಯಂತ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ. ಟ್ರೋಪಿಯನ್ನು ಮುಡಿಗೇರಿಸಿಕೊಳ್ಳಲು ಈ ಬಾರಿ ಒಟ್ಟು 20 ತಂಡ ಸೆಣೆಸಾಡಲಿವೆ. 
ವಿಶ್ವಕಪ್‌ ಮುಡಿಗೇರಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಉತ್ತಮ ನಾಯಕತ್ವ, ಉತ್ತಮ ತಂಡ ಸೇರಿದಂತೆ  ಅದೃಷ್ಟವೂ ಕೂಡ  ಪ್ರಮುಖ ಪಾತ್ರ ವಹಿಸುತ್ತದೆ. ಈ ಬಾರಿಯ ಭಾರತ ಟಿ 20 ಸಾರಥ್ಯವನ್ನು ರೋಹಿತ್‌ ಶರ್ಮ ವಹಿಸಲಿದ್ದಾರೆ.  
2007 ರಲ್ಲಿ ಆರಂಭವಾದ ಈ ಟಿ 20 ವಿಶ್ವಕಪ್‌ ಇದುವರೆಗೂ 8 ಸೀಸನ್‌ ಗಳನ್ನು ಪೂರೈಸಿ ಇದೀಗ 9 ನೇ ಸೀಸನ್ ಗೆ ಕಾಲಿಟ್ಟಿದೆ. ಇದರ ನಡುವೆ ನಮಗೆ ಇದುವರೆಗೂ ಯಾವ್ಯಾವ ತಂಡ ಟಿ 20 ವಿಶ್ವಕಪ್‌ ಟ್ರೋಪಿ ಗೆದ್ದುಕೊಂಡಿದೆ ಎಂದು ತಿಳಿದುಕೊಳುವ ಆಸಕ್ತಿ ಇದ್ದೇ ಇರುತ್ತದೆ. 

1) ಭಾರತ: ವಿಶ್ವಕಪ್‌ ಆರಂಭವಾದ ಚೊಚ್ಚಲ ಪಂದ್ಯದಲ್ಲಿ 2007ರಲ್ಲಿ ಭಾರತ ತಂಡ  ವಿಶ್ವಕಪ್‌ ಟಿ 20 ಟ್ರೋಫಿ ತನ್ನ ಮಡಿಗೇರಿಸಿಕೊಂಡಿತು.  ಧೋನಿ  ನಾಯಕತ್ವದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 5 ರನ್ ಗಳಿಂದ ಮಣಿಸಿ ತನ್ನ ಚೊಚ್ಚಲ ಟ್ರೋಫಿ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಇರ್ಫಾನ್‌ ಪಠಾಣ್‌  ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದುಕೊಂಡರು. ಇದು ಸಚಿನ್‌ ತೆಂಡೂಲ್ಕರ್‌ ಅವರ ಕೊನೆಯ ಪಂದ್ಯ ಸಹ ಆಗಿತ್ತು.
2) ಪಾಕಿಸ್ತಾನ್‌: 2009 ರಲ್ಲಿ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನ್‌ ತಂಡ ಯೂನಿಸ್‌ ಖಾನ್‌ ನಾಯಕತ್ವದಲ್ಲಿ   ಶ್ರೀಲಂಕವನ್ನು8 ವಿಕೆಟ್‌ ಗಳಿಂದ ಸೋಲಿಸಿ ಟ್ರೋಪಿಯನ್ನು ಗೆದ್ದುಕೊಂಡಿತು. ಈ ಪಂದ್ಯವು ಜೂನ್‌ 21 ರಂದು ಲಂಡನ್ ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಶಾಹಿದ್‌ ಅಫ್ರಿದಿ ಗೆದ್ದುಕೊಂಡರು.

3) ಇಂಗ್ಲೆಂಡ್‌: 2010 ರಲ್ಲಿ ವೆಸ್ಟ್ ಇಂಡಿಸ್‌ ನಲ್ಲಿ ನಡೆದ ವಿಶ್ವಕಪ್‌  ಟಿ 20 ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌  7 ವಿಕೆಟ್‌ ಗಳ ಜಯ ಗಳಿಸಿತು. ಈ ವೇಳೆ ಮಿಚೆಲ್‌ ಕ್ಲರ್ಕ್‌ ಇಂಗ್ಲೆಂಡ್‌ ತಂಡದ ಕ್ಯಾಪ್ಟನ್‌ ಆಗಿದ್ದರು.

4) ವೆಸ್ಟ್‌ ಇಂಡೀಸ್‌: 2012 ರಲ್ಲಿ ಶ್ರೀಲಂಕಾ ದಲ್ಲಿ ವೆಸ್ಟ್‌ ಇಂಡೀಸ್‌ ಹಾಗೂ ಶ್ರೀಲಂಕಾದ ನಡುವೆ  ಫೈನಲ್‌ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡ  ಶ್ರೀಲಂಕಾವನ್ನು 36 ರನ್ ಗಳಿಂದ ಸೋಲಿಸಿತು. ಆ ವೇಳೆ ಡೆರೇನ್‌ ಸೆಮಿ ವೆಸ್ಟ್‌ ಇಂಡೀಸ್‌ ತಂಡದ ನಾಯಕರಾಗಿದ್ದರು.

5) ಶ್ರೀಲಂಕಾ: 2014 ರಲ್ಲಿ ಬಾಂಗ್ಲಾದೇಶದಲ್ಲಿ ಭಾರತ ಮತ್ತು ಶ್ರೀಲಂಕಾ  ನಡುವೆ ಫೈನಲ್‌ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಶ್ರೀಲಂಕಾ ಭಾರತವನ್ನು 6 ವಿಕೆಟ್‌ ಗಳಿಂದ ಗೆದ್ದುಕೊಂಡಿತು. ಆ ವೇಳೆ ಲಸಿತ್‌ ಮಾಲಿಂಗ ಶ್ರೀಲಂಕಾದ ನಾಯಕತ್ವ ವಹಿಸಿಕೊಂಡಿದ್ದರು.
6) ವೆಸ್ಟ್‌ ಇಂಡೀಸ್‌: 2016 ರಲ್ಲಿ ವೆಸ್ಟ್‌ ಇಂಡೀಸ್‌ ಹಾಗೂ ಇಂಗ್ಲೆಂಡ್‌ ನಡುವೆ ವಿಶ್ವಕಪ್‌ ಫೈನಲ್ ಪಂದ್ಯ ಭಾರತದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ 4 ವಿಕೆಟ್‌ ಗಳಿಂದ ಗೆದ್ದುಕೊಂಡಿತು. ಆ ವೇಳೆ ಡೆರೇನ್‌ ಸಾಮಿ ವೆಸ್ಟ್‌ ಇಂಡೀಸ್‌ ವೆಸ್ಟ್‌ ಇಂಡೀಸ್‌ ನ ಕ್ಯಾಪ್ಟನ್‌ ಆಗಿದ್ದರು.

7) ಆಸ್ಟ್ರೇಲಿಯಾ: 2021 ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ ನಡುವೆ  ಓಮನ್‌ನಲ್ಲಿ ವಿಶ್ವಕಪ್‌ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲ್ಯಾಂಡ್‌ ತಂಡವನ್ನು 8 ವಿಕೆಟ್‌ ಗಳಿಂದ ಸೋಲಿಸಿತು. ಈ ವೇಳೆ ಅರೋನ್‌ ಫಿಂಚ್‌ ಆಸ್ಟ್ರೇಲಿಯಾದ ಕ್ಯಾಪ್ಟನ್‌ ಆಗಿದ್ದರು.

8) ಇಂಗ್ಲೆಂಡ್‌: 2022 ರಲ್ಲಿ ಇಂಗ್ಲೆಂಡ್‌ ಮತ್ತು ಪಾಕಿಸ್ತಾನದ ನಡುವೆ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ ಪಾಕಿಸ್ತಾನವನ್ನು 5 ವಿಕೆಟ್‌ ಗಳಿಂದ ಗೆದ್ದುಕೊಂಡಿತು. ಆ ವೇಳೆ ಜೋಸ್‌ ಬಟ್ಲರ್‌ ಇಂಗ್ಲೆಂಡ್‌ ನ ಕ್ಯಾಪ್ಟನ್‌ ಆಗಿದ್ದರು.

ಇದುವರೆಗೂ 8 ತಂಡಗಳು ಟಿ 20 ಟ್ರೋಫಿಯನ್ನು ಗೆದ್ದುಕೊಂಡಿವೆ. ಅದರಲ್ಲಿ ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ತಲಾ ಎರಡೆರಡು ಟ್ರೋಫಿಯನ್ನು ಗೆದ್ದುಕೊಂಡಿದ್ದರೆ, ಉಳಿದೆಲ್ಲಾ ತಂಡಗಳು ಒಂದು ಟ್ರೋಫಿ ಗೆದ್ದುಕೊಂಡಿವೆ. ಈ ಬಾರಿಯ ಟಿ 20 ವರ್ಲ್ಡ್‌ ಕಪ್‌ ಕಿರೀಟ ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.

Post a comment

No Reviews