
ಬ್ಯಾಂಕ್ ನೋಟಿಸ್ಗೆ ಹೆದರಿ ರೈತ ಆತ್ಮಹತ್ಯೆ
ಕಲಬುರಗಿ: ಬ್ಯಾಂಕ್ ನೋಟಿಸ್ಗೆ ಹೆದರಿ ಪೆಟ್ರೋಲ್ ಸುರಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಂಚೋಳಿ ತಾಲೂಕಿನ ಪೊತಂಗಲ ಗ್ರಾಮದಲ್ಲಿ ನಡೆದಿದೆ. ಪಾಂಡಪ್ಪ ತಿಪ್ಪಣ್ಣ ಕೊರುವನ್ (45) ಆತ್ಮಹತ್ಯೆ ಮಾಡಿಕೊಂಡ ರೈತ.
ಮೃತ ವ್ಯಕ್ತಿ ತೊಗರಿ ಬೆಳೆಯಲು ಬ್ಯಾಂಕ್ ಹಾಗೂ ಖಾಸಗಿಯಾಗಿ ಲಕ್ಷಾಂತರ ರೂ.ಸಾಲ ಮಾಡಿದ್ದ. ಆದರೆ, ದುರಾದೃಷ್ಟವಶಾತ್ ನಿರಂತರವಾಗಿ ಸುರಿದ ಮಳೆಗೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ನಾಶವಾಗಿತ್ತು. ಇತ್ತ ಬ್ಯಾಂಕ್ ಅಧಿಕಾರಿಗಳ ಸಾಲದ ಕಿರುಕುಳಕ್ಕೆ ಹೆದರಿ ತಿಪ್ಪಣ್ಣ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಸುಲೇಪೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಳೆ ನಾಶಕ್ಕೆ ಮನನೊಂದು ರೈತ ಆತ್ಮಹತ್ಯೆ
ರಾಯಚೂರು: ಕಷ್ಟಪಟ್ಟು ಬೆಳೆದಿದ್ದ ಹತ್ತಿ ಬೆಳೆ ನಾಶವಾಗಿದ್ದಕ್ಕೆ ಮನನೊಂದ ರೈತ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಸೂಗೂರು ಗ್ರಾಮದಲ್ಲಿ ನಡೆದಿದೆ. ಮಹಾದೇವ ಸಾಗರ್(42) ಮೃತ ರೈತ. ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿ 4 ಎಕರೆ ಹತ್ತಿ ಬೆಳೆ ಹಾನಿಯಾಗಿದೆ. ಈ ಹಿನ್ನಲೆ ಮನೆಯಿಂದ ಜಮೀನಿಗೆ ಹೋಗುವುದಾಗಿ ಹೇಳಿ ಹೋಗಿ ರೈತ ವಿಷಸೇವನೆ ಮಾಡಿದ್ದ. ಕೂಡಲೇ ಆತನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ರೈತ ಮಹಾದೇವ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Poll (Public Option)

Post a comment
Log in to write reviews