ರಾಕಿಂಗ್ ಸ್ಟಾರ್ ಜೊತೆ ಏನೆಲ್ಲಾ ಮಾಡಬೇಕೆಂಬ ಮನದಾಸೆ ಬಿಚ್ಚಿಟ್ಟ ಈ ಬೋಲ್ಡ್ ಹಿರೋಯಿನ್ ಯಾರು?

ಗಾಯಕಿಯಾಗಿ ಮಾತ್ರವಲ್ಲದೆ ನಟಿಯಾಗಿಯೂ ಮಿಂಚುತ್ತಿದ್ದಾರೆ ಈ ನಟಿ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದಕ್ಕೆ ಕಾರಣವೇ ಅವರ ಬೋಲ್ಡ್ ಫೋಟೋಶೂಟ್. ಕಡಿಮೆ ಬಟ್ಟೆ ಹಾಕಿಕೊಂಡು ದಿನನಿತ್ಯವೂ ಟ್ರೋಲ್ ಆಗುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ ಈ ನಟಿ. ದೊಡ್ಡ ದೊಡ್ಡ ಸಮಾರಂಭಗಳಲ್ಲಿಯೂ ತುಂಡು ಬಟ್ಟೆ. ಅಭಿಮಾನಿಗಳಿಗೆ ತೀರಾ ಮುಜುಗರ ಹಾಗೂ ಶಾಕಿಂಗ್ ಆಗುವಂಥ ಬಟ್ಟೆ ಧರಿಸುವುದು ಈಕೆಗೀಗ ಮಾಮೂಲಾಗಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಇಂಥ ಬಟ್ಟೆ ತೊಟ್ಟು ಸಕತ್ ಆ್ಯಕ್ಟೀವ್ ಆಗಿರ್ತಾರೆ ಈ ನಟಿ. ಸದ್ಯ ಈಗ ‘ಮಾರ್ನಮಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಇದೀಗ ಈ ನಟಿ ಚಿತ್ತಾರ ರೈಸಿಂಗ್ ಸ್ಟಾರ್ ಅವಾರ್ಡ್ ರೈಸಿಂಗ್ ಸ್ಟಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಯಶ್ ಜೊತೆಗೆ ತಾವು ನಟನೆ ಮಾಡಬೇಕು ಎನ್ನುವ ಆಸೆಯನ್ನು ಹೊರಕ್ಕೆ ಹಾಕಿದರು. ಇಂಥ ಪ್ರಶಸ್ತಿ ಪಡೆದುಕೊಳ್ಳುವಾಗ ಶಿಫಾರಸು ಮಾಡಬೇಕು ಎಂದೆಲ್ಲಾ ಆರಂಭದಲ್ಲಿ ಕೇಳಿದ್ದೆ. ಆದರೆ ಈಗ ನನಗೂ ಈ ಅವಾರ್ಡ್ ಬಂದ ಕಾರಣದಿಂದ ಅವೆಲ್ಲಾ ಸುಳ್ಳು ಎಂದು ಗೊತ್ತಾಯಿತು. ನಮ್ಮ ಕೆಲಸವನ್ನು ನಮ್ಮ ಪಾಡಿಗೆ ಮಾಡಿಕೊಂಡು ಹೋದರೆ ಎಲ್ಲರೂ ಗುರುತಿಸುತ್ತಾರೆ ಎಂದು ತಿಳಿಯಿತು. ಅವಾರ್ಡ್ ಪಡೆಯಬೇಕು ಎಂದು ನಾನು ನಟಿಸಿಲ್ಲ. ಆದರೆ ಅದೇ ನನ್ನನ್ನು ಹುಡುಕಿ ಬಂದಿರುವುದು ಖುಷಿ ಕೊಟ್ಟಿದೆ ಎಂದಿದ್ದಾರೆ ಬೋಲ್ಡ್ ನಟಿ ಚೈತ್ರಾ.
ಇದೇ ವೇಳೆ, ಯಾವ ನಟ ನಿಮಗೆ ಇಷ್ಟ ಎಂಬ ಪ್ರಶ್ನೆ ಎದುರಾದಾಗ, ತುಂಬಾ ನಟರು ಇದ್ದಾರೆ. ಆದರೆ ಯಶ್ ನನ್ನ ಫೆವರೆಟ್ ನಟ. ಅವರ ಎಲ್ಲಾ ಸಿನಿಮಾಗಳನ್ನೂ ನೋಡಿದ್ದೇನೆ. ಯಾವ ಪಾತ್ರ ಕೊಟ್ಟರೂ ಅವರ ಜೊತೆ ಮಾಡಲು ರೆಡಿ ಎಂದಿದ್ದಾರೆ. ಹಾಗಿದ್ದರೆ ಅಕ್ಕ-ತಂಗಿ, ಚಿಕ್ಕಮ್ಮ ಇಂಥ ಪಾತ್ರ ಓಕೆನಾ ಎಂದಾಗ ಇಲ್ಲಪ್ಪಾ ಅವೆಲ್ಲಾ ಬೇಡ, ಎದುರು ಮನೆ, ಹಿಂದಿನ ಮನೆ, ಅತ್ತೆ-ಮಗಳು ಇಂಥ ಪಾತ್ರಗಳು ನನಗೆ ಬೇಕು ಎನ್ನುವ ಮೂಲಕ ಯಶ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುವ ಆಸೆಯನ್ನು ಚೈತ್ರಾ ಹೊರಕ್ಕೆ ಹಾಕಿದ್ದಾರೆ. ಮುಂಬರುವ ಟಾಕ್ಸಿಕ್ ಚಿತ್ರದಲ್ಲಿ ತಮಗೆ ಅವಕಾಶ ಸಿಗಲಿ ಎಂದು ಆಸೆ ಪಟ್ಟಿದ್ದಾರೆ ಎಂನ್ನುವುದು ಸ್ಪಷ್ಟವಾಗಿದೆ.
ಅಂದಹಾಗೆ ಚೈತ್ರಾ ಅವರ ಸಿನಿ ಜರ್ನಿ ಕುರಿತು ಹೇಳುವುದಾದರೆ, ಇವರು 'ಮಹಿರಾ' ಎಂಬ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಅಲ್ಲಿಂದ ಅವರಿಗೆ ತುಂಬಾ ಆಫರ್ ಸಿಕ್ಕಿದೆ. 'ತಲೆ ದಂಡ', 'ಗಿಲ್ಕಿ', 'ಅದೃಶ್ಯ' ಮೊದಲಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 'ಟೋಬಿ' ಮತ್ತು 'ಸಪ್ತಸಾಗರದಾಚೆ ಎಲ್ಲೋ' ಚಿತ್ರಗಳು ಚೈತ್ರಾಗೆ ದೊಡ್ಡ ಬ್ರೇಕ್ ಕೊಟ್ಟಿವೆ. ಅದರಲ್ಲಿಯೂ 'ಟೋಬಿ' ಚಿತ್ರದಲ್ಲಿನ ಇವರ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಚಿತ್ರಕ್ಕಾಗಿ ನಟಿಗೆ ಫಿಲಂ ಫೇರ್ ಅವಾರ್ಡ್ ಕೂಡ ಸಿಕ್ಕಿದೆ. ಕೇವಲ ನಟಿ ಮಾತ್ರವಲ್ಲದೇ, ಈಕೆ ಗಾಯಕಿಯೂ ಹೌದು. 'ಗರುಡ ಗಮನ ವೃಷಭ ವಾಹನ' ಚಿತ್ರದ ಸೋಜುಗಾದ ಸೂಜು ಮಲ್ಲಿಗೆ ಹಾಡು ಇಂದಿಗೂ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ. ಸದ್ಯಕ್ಕೆ ನಟಿಗೆ ಯಶ್ ಜೊತೆ ನಟಿಸೋ ಭಾಗ್ಯ ಸಿಗುವುದೋ ಎಂದು ಕಾದು ನೋಡಬೇಕಿದೆ.
Poll (Public Option)

Post a comment
Log in to write reviews