
ಬೆಂಗಳೂರು: ಇಡೀ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಪಾತ್ರ ಇಲ್ಲ ಎಂದಾದರೆ ದೇವರಾಜೇಗೌಡ, ಶಿವರಾಮೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಏಕೆ ಮಾತನಾಡಿದರು? ಇನ್ನು ಏನಾದರೂ ಸಾಕ್ಷ್ಯ, ಮೆಟಿರಿಯಲ್ ಇದೆಯಾ ಎಂದು ಏಕೆ ಕೇಳಿದರು? ಬ್ರೋಕರ್ ಕೆಲಸ, ತಲೆ ಹಿಡಿಯುವ ಕೆಲಸ ಮಾಡುತ್ತಿರುವುದು ಅವರು. ನನ್ನ ಬಗ್ಗೆ ಪಕ್ಷದಿಂದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿ ಅವಹೇಳನ ಮಾಡುತ್ತೀರಾ? ನೀವು ಯಾವ ನೈತಿಕತೆ ಇಟ್ಟುಕೊಂಡಿದ್ದೀರಾ ಎಂದು ಕಿಡಿಕಾರಿದರು.
ಗೃಹ ಸಚಿವರು ತನಿಖೆ ನಿಷ್ಪಕ್ಷಪಾತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ನಿಜವಾದ ಅಪರಾಧಿ ವಿರುದ್ಧ ಕ್ರಮ ಕೈಗೊಳ್ಳಲಿ. ನಮ್ಮದ್ದೇನು ತಕರಾರಿಲ್ಲ. ನಿಮಗೂ ತಂದೆ ತಾಯಿ ಇದ್ದಾರೆ. ಒಡಹುಟ್ಟಿದ ಅಕ್ಕತಂಗಿಯರಿದ್ದಾರೆ. ಅರ್ಥ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವರಾಜೇಗೌಡ ಜತೆ ಡಿಕೆಶಿ ಮಾತನಾಡಿದ್ದು ಏಕೆ?
ಇದೊಂದು ರಾಜಕೀಯ ಪಕ್ಷವಾ? ಇವರಿಗೆ ಗೌರವ ಇದೆಯಾ? ಮಾನ ಮಾರ್ಯಾದೆ ಇದೆಯಾ? ಅದೇ ನಿಮ್ಮ ಸಿಡಿ ಶಿವು (ಡಿ.ಕೆ. ಶಿವಕುಮಾರ್) ಮಾಡಿದ್ದು ಗೊತ್ತಿಲ್ಲವೇ? ಆ ವ್ಯಕ್ತಿಯನ್ನು ಶಿವಕುಮಾರ್ ಎನ್ನುವುದು ಉಪಯೋಗಕ್ಕೆ ಬರೋದಿಲ್ಲ. ಅವರನ್ನು ಸಿಡಿ ಶಿವು ಅಂತಲೇ ಕರೆಯಬೇಕು. ಯಾಕಪ್ಪ ಸಿಡಿ ಶಿವು ಬ್ರೋಕರ್ ಶಿವರಾಮೇಗೌಡ ಜತೆ ಮಾತನಾಡಿದೆ ಎಂದು ಪ್ರಶ್ನಿಸಿದರು.
Poll (Public Option)

Post a comment
Log in to write reviews