2024-09-19 09:17:37

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಇದುವರೆಗೂ ಐಪಿಎಲ್ ನಲ್ಲಿ ಟ್ರೋಫಿ ಗೆದ್ದ ತಂಡಗಳಾವುವು

ಭಾರತದಲ್ಲಿ ಐಪಿಎಲ್ ಎಲ್ಲಿಲ್ಲದ ಕ್ರೇಜ್ ಅನ್ನು ಹುಟ್ಟಿ ಹಾಕಿದೆ . ಐಪಿಎಲ್ ಬಂದ ನಂತರ ಎಷ್ಟೋ ಜನ ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ ಅನ್ನು ನೋಡುವುದನ್ನೇ ಮರೆತುಬಿಟ್ಟಿದ್ದಾರೆ. ಭಾರತದಲ್ಲಿ ಐಪಿಎಲ್ ಕ್ರೇಜ್ ಆ ಮಟ್ಟಿಗೆ ಇದೆ.  ಬೇರೆ ಬೇರೆ ರಾಜ್ಯದ 10 ತಂಡಗಳು ಆಡುವ ಈ ಪಂದ್ಯವನ್ನು ನೋಡಲು ಜನ ಕಾತುರದಿಂದ ಕಾದು ಕುಳಿತಿರುತ್ತಾರೆ. ಹಾಗೆಯೇ ಟಿಕೆಟ್ ಬೆಲೆ ಎಷ್ಟೇ ಹೆಚ್ಚಾದರೂ ತಮ್ಮ ತಂಡವನ್ನು ಹುರಿದುಂಬಿಸಲು ದುಬಾರಿ ದರ ಕೊಟ್ಟು ನೋಡುತ್ತಾರೆ. ಇಂದು ನಾವು ಐಪಿಎಲ್ ನ 17 ಸೀಜನ್ ಗಳಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡ ಯಾವುದು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

1) ಮುಂಬೈ ಇಂಡಿಯನ್ಸ್.
ನೀತಾ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್‌ ಕೂಡ ಐಪಿಎಲ್ ನ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಮುಂಬೈ ಇಂಡಿಯನ್ಸ್ ಇದುವರೆಗೂ  ರೋಹಿತ್ ಶರ್ಮಾ ನಾಯಕತ್ವದಲ್ಲಿ 5 ಟ್ರೋಫಿ ಗೆದ್ದುಕೊಂಡಿದೆ. 2013,  2015, 2017, 2019, 2020 ರಲ್ಲಿ ಆಡಿದ 17 ಸೀಸನ್ ಅಲ್ಲಿ ಮುಂಬೈ ಇಂಡಿಯನ್ಸ್ 5 ಟ್ರೋಫಿ ಗೆದ್ದಿರುವ ತಂಡವಾಗಿದೆ.

2) ಚೆನ್ನೈ ಸೂಪರ್ ಕಿಂಗ್ಸ್
ನಾರಾಯಣ ಸ್ವಾಮಿ ಶ್ರೀನಿವಾಸನ್‌ ಮಾಲಿಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಧೋನಿ ನಾಯಕತ್ವದಲ್ಲಿ ಇದುವರೆಗೂ 5 ಐಪಿಎಲ್ ಟ್ರೋಪಿ ಗೆದ್ದು ಬೀಗಿದೆ. 2010, 2011, 2018, 2021, 2023 ರಲ್ಲಿ ಆಡಿದ 15 ಸೀಸನ್ ನಲ್ಲಿ ಒಟ್ಟು 5 ಟ್ರೋಫಿ ಇವರು ಗೆದಿದ್ದು, ಇವರು ಮುಂಬೈ ಇಂಡಿಯನ್ಸ್‌ ನ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ತಂಡ ಸಹ ಐಪಿಎಲ್ ನ ಯಶಸ್ವಿ ತಂಡ ಎಂದು  ಕರೆಯಲಾಗುತ್ತದೆ. 

3)ಕೋಲ್ಕತಾ ನೈಟ್ ರೈಡರ್ಸ್
ನಟ ಶಾರುಖ್‌ ಖಾನ್‌ ಒಡೆತನದವಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಇದುವರೆಗೂ ಮೂರು ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಇದರಲ್ಲಿ ಎರಡು ಟ್ರೋಫಿಗಳನ್ನು 2012, 2014 ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಗೆದ್ದುಕೊಂಡಿದ್ದರೆ. ಇನ್ನೊಂದು ಟ್ರೋಫಿ 2024ರಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಗೆದ್ದುಕೊಂಡಿತು. ಪ್ರಮುಖ ವಿಚಾರ ಎಂದರೆ ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಎರಡು ಬಾರಿ ಹಾಗೂ ಈ ಬಾರಿ ಗಂಭೀರ್‌ ತಂಡಕ್ಕೆ ಮೆಂಟರ್‌ ಆಗಿರುವುದು ವಿಶೇಷ.

4) ರಾಜಸ್ಥಾನ್ ರಾಯಲ್ಸ್ 
ಮನೋಜ್‌ ಬಾಡಲೆ ಸಹಭಾಗಿತ್ವದ  ರಾಜಸ್ಥಾನ್‌ ರಾಯಲ್ಸ್‌ 2008 ಐ ಪಿ ಎಲ್ ನಾ ಆರಂಭಿಕ ಸೀಸನ್ ಅಲ್ಲಿ  ಶೇನ್ ವಾರ್ನ್ ನಾಯಕತ್ವದಲ್ಲಿ ಮೊದಲ ಬಾರಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಇದುವರೆಗೂ ರಾಜಸ್ಥಾನ್ ರಾಯಲ್ಸ್ ಒಂದು ಟ್ರೋಫಿಯನ್ನು ಗೆದ್ದುಕೊಂಡಿದೆ.

5) ಡೆಕ್ಕನ್ ಚಾರ್ಜರ್ಸ್ 
ಗಾಯಿತ್ರಿ ರೆಡ್ಡಿ ಸಹಭಾಗಿತ್ವದ ಡೆಕ್ಕನ್ ಚಾರ್ಜರ್ಸ್  ಐಪಿಎಲ್ ಆರಂಭದಲ್ಲಿ  ಕೆಲವು ವರ್ಷ ಐಪಿಎಲ್‌  ಅನ್ನು ಆಡಿತ್ತು.  ಇದು 2009ರಲ್ಲಿ ಆಡಮ್‌ ಗಿಲ್‌ ಕ್ರಿಷ್ಟ್ ನಾಯಕತ್ವದಲ್ಲಿ ಐಪಿಎಲ್ ಕಪ್ ಅನ್ನು  ಗೆದ್ದುಕೊಂಡಿತ್ತು.

5) ಸನ್ ರೈಸರ್ಸ್ ಹೈದರಾಬಾದ್ 
ಕಾವ್ಯಾ ಮಾರನ್‌ ಮಾಲೀಕತ್ವದ ಹಾಗೂ  ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್  ಹೈದರಾಬಾದ್ 2016 ರಂದು ಆರ್‌ಸಿಬಿ ಯನ್ನು ಮಣಿಸಿ ಕಪ್ ಅನ್ನು ತನ್ನದಾಗಿಸಿಕೊಂಡಿತ್ತು. ಇದುವರೆಗೆ ಹೈದರಾಬಾದ್ ಒಂದು ಕಪ್ ಅನ್ನು ಮಾತ್ರ ಗೆದ್ದುಕೊಂಡಿದೆ.

6) ಗುಜರಾತ್ ಟೈಟಾನ್ಸ್
ಸಿಸಿವಿ  ಕ್ಯಾಪಿಟಲ್‌ ಪಾರ್ಟ್‌ನರ್ಸ ಸಹಭಾಗಿತ್ವದ ಗುಜರಾತ್ ಟೈಟನ್ಸ್ 2022 ರಲ್ಲಿ ಹೊಸ ತಂಡವಾಗಿ ಐಪಿಎಲ್ ಗೆ ಸೇರ್ಪಡೆಗೊಂಡಿತು. ಸೇರ್ಪಡೆಯಾದ ಮೊದಲ ಸೀಸನ್ ನಲ್ಲಿಯೇ  ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಇದುವರೆಗೂ ಗುಜರಾತ್ ಒಂದು ಕಪ್ಪನ್ನು ಗೆದ್ದುಕೊಂಡಿದೆ.

ಮೇಲಿನ ಇಷ್ಟು ತಂಡಗಳು ಇದುವರೆಗೂ ಐಪಿಎಲ್‌ ನಲ್ಲಿ ಟ್ರೋಫಿ ಗೆದ್ದುಕೊಂಡ ತಂಡಗಳಾಗಿವೆ. ಇನ್ನೂಳಿದಂತೆ ಅರ್‌ಸಿಬಿ,  ಡೆಲ್ಲಿ ಕ್ಯಾಪಿಟಲ್ಸ್‌, ಲಖ್ನೋ ಸೂಪರ್‌ ಜೈಂಟ್ಸ್‌, ಕಿಂಗ್ಸ್  ಇಲವೆನ್‌ ಪಂಜಾಬ್‌ ತಂಡಗಳು ಕಪ್‌ ಗೆಲ್ಲಬೇಕಾಗಿರುವ ತಂಡಗಳಾಗಿವೆ.
 

Post a comment

No Reviews