ಪೊಲೀಸ್ ಕಸ್ಟಡಿಯಲ್ಲಿರೋ ದರ್ಶನ್ ಬಿಪಿ ಫುಲ್ ಹೈ ಮೆಡಿಕಲ್ ವರದಿಯಲ್ಲೇನಿದೆ ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತಿರುವ ನಟ ದರ್ಶನ್‌ನನ್ನ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈಗಾಗಲೇ 9 ದಿನಗಳ ಕಾಲ ಪೊಲೀಸರ ವಿಚಾರಣೆ ಎದುರಿಸಿದ್ದ ದರ್ಶನ್ ಮತ್ತೆರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು ವಿಚಾರಣ ಮುಂದುವರಿಯಲಿದೆ. ಆದ್ರೆ ದರ್ಶನ್ ಗೆಳತಿ ಪವಿತ್ರಾಗೌಡ ಸೇರಿದಂತೆ ಉಳಿದ 10 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟಾಗಿದ್ದಾರೆ.
ಇದೀಗ ಈ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಮೇಡಿಕಲ್ ಎಕ್ಸಾಮಿನೇಷನ್ ವರದಿ ಬಹಿರಂಗವಾಗಿದೆ. ಆರೋಪಿ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದ 11 ದಿನದಲ್ಲಿ ದರ್ಶನ್ ತೂಕದಲ್ಲಿ, ಬಿಪಿಯಲ್ಲಿ ಬದಲಾವಣೆಯಾಗಿದೆ.
ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಜೂನ್ ಹನ್ನೊಂದನೆ ತಾರೀಖಿನಂದು ಬಂಧನ ಮಾಡಿದ್ದರು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಮೇಡಿಕಲ್ ಎಕ್ಸಾಮಿನೇಷನ್ ಮಾಡಿದಾಗ ಇದ್ದ ಬಿಪಿ ಕಸ್ಟಡಿಯಲ್ಲಿದ್ದ ದಿನಗಳಲ್ಲಿ ದುಪ್ಪಟ್ಟು ಹೆಚ್ಚಾಗಿದೆ. ಇನ್ನು ಆರೋಪಿ ದರ್ಶನ್ ತೂಕದಲ್ಲು ಕೂಡ ವ್ಯತ್ಯಾಸ ಕಂಡು ಬಂದಿದೆ ಎಂದು ಈ ರಿಪೋರ್ಟ್‌ನಿಂದ ತಿಳಿದು ಬಂದಿದೆ.
Poll (Public Option)

Post a comment
Log in to write reviews