
ಗೋವಾಕ್ಕೆ ನಾವು ಮೋಜು ಮಸ್ತಿಗೆಂದೇ ತೆರಳಿದ್ದೆವು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಹೇಳಿದ್ದಾರೆ.
ಗೋವಾ ಗಲಾಟೆ ಸಂಬಂಧ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಚುನಾವಣೆ ನಡೆದಿತ್ತು. ಅದರಂತೆ ಗೆದ್ದ ಸಂಭ್ರಮದಲ್ಲಿ ಪಾರ್ಟಿ ಹಮ್ಮಿಕೊಳ್ಳಲು ಈ ಹಿಂದೆ ಮಾತುಕತೆ ನಡೆದಿತ್ತು. ಇದಕ್ಕಾಗಿ ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದೆವು. ಅಲ್ಲಿ ನಡೆದ ಗಲಾಟೆಯ ವೇಳೆ ನನ್ನ ತುಟಿಗೂ ಗಾಯ ಆಗಿದೆ. ಈ ಸಮಯದಲ್ಲಿ ಸತೀಶ್ ನನಗೆ ಗನ್ ಇಟ್ಟು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದರು.
ಇದೇ ವೇಳೆ ಮಾತನಾಡಿದ ನಿರ್ಮಾಪಕ ಎ.ಗಣೇಶ್, ಪಾರ್ಟಿಯ ವೇಳೆ ಕ್ಷುಲ್ಲಕ ವಿಚಾರಕ್ಕೆ ಸತೀಶ್ ಆರ್ಯ ಹಾಗೂ ರಥಾವರ ಮಂಜು ನಡುವೆ ಗಲಾಟೆ ಶುರುವಾಯಿತು. ಹೀಗಾಗಿ ನಾನು ಇಬ್ಬರ ಜಗಳ ಬಿಡಿಸಲು ಮುಂದಾದೆ. ಈ ವೇಳೆಯಲ್ಲಿ ಸಿನಿಮಾ ಶೈಲಿಯಲ್ಲಿಯೇ ಸ್ಥಳದಲ್ಲಿದ್ದ ಫೋರ್ಕ್ ಸ್ಪೂನ್ ಯಿಂದ ಸತೀಶ್, ನನ್ನ ಕಣ್ಣಿನ ಭಾಗದ ಕಡೆ ಚುಚ್ಚಿದ್ದಾರೆ. ಸ್ಪಲ್ಪದರಲ್ಲೇ ಪಾರಾದೆ ಎಂದು ಆರೋಪಿಸಿದರು.
ಘಟನೆಯ ನಂತರ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ವಾಪಾಸ್ಸಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. ರಥಾವರ ಮಂಜುನಾಥ್ ಅವರಿಗೆ ಗಂಭೀರ ಗಾಯ ಆಗಿದೆ ಎಂದರು.
Poll (Public Option)

Post a comment
Log in to write reviews