
ಬೆಂಗಳೂರು ; ವಿಧಾನಸೌಧದಲ್ಲಿ ಸೋಮವಾರ (ಜುಲೈ 8) ಸಿಎಂ ಕಾರ್ಯಕಾರಣಿ ಸಭೆಯಲ್ಲಿ ಜಿ ಪರಮೇಶ್ವರ್ ಭಾಗಿಯಾಗಿದ್ದರು. ಈ ಕುರಿತು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು ಜಿಲ್ಲೆಗಳ ಸಮಸ್ಯೆಗಳು ಹಾಗೂ ಸರ್ಕಾರದ ಕಾರ್ಯಕಲಾಪಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಯಲು ಸಿಎಂ ಸಿದ್ದರಾಮಯ್ಯ 2 ದಿನಗಳ ಸಭೆ ಕರೆದಿದ್ದಾರೆ. ಆಡಳಿತವನ್ನು ಆನ್ನಷ್ಟು ಚುರುಕುಗೊಳಿಸಲು ಮತ್ತು ಪರಿಣಾಮಕಾರಿಯಾಗಿ ಅಧಿಕಾರಿಗಳು ಸ್ವಂದಿಸುವಂತಾಗುವ ನಿಟ್ಟಿನಲ್ಲಿ ಈ ಸಭೆ ಕರೆಯಲಾಗಿದೆ ಎಂದು ತಿಳಿಸಿದರು
ಇದೆ ವೇಳೆ ಗ್ಯಾರಂಟಿ ಯೋಜನೆಯಿಂದಾಗಿ ಆರ್ಥಿಕ ವಿಪತ್ತು ಮನೆಮಾಡಿದೆ ಎಂಬ ಯಾತ್ನಾಳ್ ಆರೋಪದ ಬಗ್ಗೆ ಮಾತಾಡಿದ ಅವರು ರಾಜ್ಯದ ಆಡಳಿತ ಮಾಡೋಕೆ ಜನ ನಮ್ಮನ್ನ ಆಯ್ಕೆ ಮಾಡಿದ್ದಾರೆ . ಅವರು ಕೇಂದ್ರದಲ್ಲಿ ಆಡಳಿತ ಮಾಡಲಿ ಇಲ್ಲಿನ ವಿಷಯಕ್ಕೆ ಮೂಗು ತೋರಿಸುವ ಅಗತ್ಯವಿಲ್ಲಾ. ಗ್ಯಾರಂಟಿ ಯೋಜನೆಗಳ ಸಾಧಕ ಬಾದಕಗಳ ಕುರಿತು ನಾವೇ ನೋಡಿಕೊಳ್ಳುತ್ತೇವೆ .ಈ ಕುರಿತು ಅವರ ಸಲಹೆ ನಮಗೆ ಬೇಡ ಎಂದು ಖಡಕ್ ಎಚ್ಚರಿಕೆ ನೀಡಿದರು.
ಜೊತೆಗೆ ಮುಡಾ ವಿಚಾರ ಕುರಿತು ಮಾತಾಡಿದ ಪರಮೇಶ್ವರ್ ನಮ್ಮ ಆಡಳಿತ ತೆರದ ಪುಸ್ತಕ ಅದರ ಬಗ್ಗೆ ಸಿಎಂ ನಿಖರ ಮಾಹಿತಿ ನೀಡಿದ್ದಾರೆ ಎಂದರು.
Poll (Public Option)

Post a comment
Log in to write reviews