
ಬೆಂಗಳೂರು : ನಟ ಯುವರಾಜ್ ಕುಮಾರ್ ಪತ್ನಿ ಮೇಲೆ ಮಾಡಿದ ಆರೋಪಕ್ಕೆ ಪತ್ನಿ ಶ್ರೀದೇವಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ನಟ ಯುವರಾಜ್ ಕುಮಾರ್ ಜೂನ್ 6ನೇ ತಾರೀಖು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿ, ಕೋರ್ಟ್ ಮೆಟ್ಟಿಲೇರಿದ್ದರು. ಪತ್ನಿಯ ಕುರಿತಾಗಿ ಅನೇಕ ಆರೋಪಗಳನ್ನು ಮಾಡಿದ್ದರು. ಹೀಗಾಗಿ ಫ್ಯಾಮಿಲಿ ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿತ್ತು. ಅದರಂತೆಯೇ ಇಂದು ವಿಚಾರಣೆ ನಡೆಯಲಿದೆ.
ಈಗಾಗಲೇ ಕಳೆದ 15 ದಿನದಿಂದ ಕರ್ನಾಟಕದಲ್ಲಿದ್ದ ಯುವ ಪತ್ನಿ ಶ್ರೀದೇವಿ ಮತ್ತೆ ಅಮೆರಿಕದತ್ತ ಹೊರಟಿದ್ದಾರೆ. ವಿದೇಶಕ್ಕೆ ಹೊರಡುವ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಶ್ರೀದೇವಿ ಅವರು, ಕಳೆದ 15 ದಿನದಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜೊತೆ ಇದ್ದಾಗ, ನನ್ನ ಖಾಸಗಿ ಬದುಕನ್ನು ಗೌರವಿಸಿ, ನನ್ನ ಘನತೆಯನ್ನು ಕಾಪಾಡುವಲ್ಲಿ, ಅತ್ಯಂತ ಸೂಕ್ಷ್ಮ ಮತ್ತು ಜವಾಬ್ದಾರಿಯುತ ನಡೆ ತೋರಿದ ಮಾಧ್ಯಮದವರೂ ಸೇರಿ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ
ಸತ್ಯ-ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಂಬಿದ್ದೇನೆ, ಅದಕ್ಕಾಗಿ ಹೋರಾಡುವೆ. ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ನಾನು ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಉನ್ನತ ಶಿಕ್ಷಣಕ್ಕಾಗಿ ಹಾರ್ವರ್ಡ್‌ಗೆ ಹೋಗ್ತೇನೆ, ಅಮೆರಿಕದಲ್ಲಿ ನನ್ನ ಕಾಯಕ ಮುಂದುವರಿಸುವೆ. ಸಮಯ ಬಂದಾಗ ಕರ್ನಾಟಕಕ್ಕೆ ಮತ್ತೆ ಬರುವೆ ಎಂದು ಶ್ರೀದೇವಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ
Poll (Public Option)

Post a comment
Log in to write reviews