ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ತೀವ್ರ ವಿಚಾರಣೆ ಎದುರಿಸುತ್ತಿದ್ದಾರೆ. ಇತ್ತ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿರುವ ದರ್ಶನ್ ಅವರನ್ನು ಇಂದು ವಕೀಲರು ಭೇಟಿಯಾಗಿದ್ದಾರೆ. ನಂತರ ಮಾಧ್ಯಮದವರೊಂದಿಗೆ ವಕೀಲ ಅನಿಲ್ ಬಾಬು, ಕೋರ್ಟ್ ನಿರ್ದೇಶನದ ಪ್ರಕಾರ ಇವತ್ತು ಸಂಜೆ 5 ಗಂಟೆಯೊಳಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಅವರು ಇನ್ನೂ ಕಸ್ಟಡಿಗೆ ಕೇಳ್ತಾರೋ? ಇಲ್ಲವೋ ಅನ್ನೋದ್ರ ಬಗ್ಗೆ ನಮಗೆ ತಿಳಿದಿಲ್ಲಾ. ಮುಂದಿನ ನಿರ್ಧಾರಗಳ ನಂತರ ಕಾನೂನು ಹೋರಾಟದ ಬಗ್ಗೆ ನಿರ್ಧಾರ ಮಾಡ್ತೇವೆ ಎಂದು ತಿಳಿಸಿದರು.
ಬಹುತೇಕ ತನಿಖೆ ಮುಗಿದಿರಬಹುದು. ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಚರ್ಚೆ ಮಾಡಿ ಜಾಮೀನು ಅರ್ಜಿ ಹಾಕ್ತೇವೆ. ದರ್ಶನ್ ಜೊತೆ ಮಾತುಕತೆ ಮಾಡಿಕೊಂಡು ಬಂದಿದ್ದೇವೆ ಅಷ್ಟೇ. ಅವರ ಆರೋಗ್ಯ ಚೆನ್ನಾಗಿದೆ ಎಂದು ವಕೀಲ ಅನೀಲ್ ಬಾಬು ತಿಳಿಸಿದ್ದಾರೆ.
Post a comment
Log in to write reviews