
ಬೆಂಗಳೂರು: ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಳೆಹಾನಿ ಸಂಬಂಧ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಳೆಹಾನಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇವೆ. ಎಲ್ಲೆಲ್ಲಿ ಸಮಸ್ಯೆ ಆಗಿದೆಯೋ ಅಲ್ಲಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದರು.
ಭಾನುವಾರ ಬೆಂಗಳೂರಿನಲ್ಲಿ ಸುರಿದ ಮಳೆರಾಯ ಅವಾಂತರ ಸೃಷ್ಠಿಸಿದ್ದು, ರಾತ್ರಿ ಸುರಿದ ಮಳೆಗೆ 210 ಕ್ಕೂ ಅಧಿಕ ಮರಗಳು ಧರೆಗುರುಳಿವೆ. ಬಿರುಗಾಳಿ ಮಳೆಗೆ ಬೆಂಗಳೂರಿನ ಹಲವಡೆ ಮರಗಳು ಧರೆಗುರುಳಿವೆ. ಮಹಾಲಕ್ಷ್ಮೀ ಲೇಔಟ್ ನಲ್ಲಿ ಸುಮಾರು 10ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು ಹಲವು ಕಾರ್‌ಗಳು ಜಖಂಗೊಂಡಿದೆ. ಬಸವೇಶ್ವರನಗರದಲ್ಲಿ ಮರದ ಕೊಂಬೆ ಬಿದ್ದು, ಪಾನಿಪುರಿ ಅಂಗಡಿಗೆ ಹಾನಿಯಾಗಿದೆ. ಜಯನಗರ, ಕೋರಮಂಗಲ ಬಳಿ ವಿದ್ಯುತ್ ಕಂಬ, ಆಟೋ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ.
ಸದಾಶಿವನಗರ ಬಳಿ ಹಾಗೂ ಗಿರಿನಗರದಲ್ಲಿ ಬೃಹತ್ ಗಾತ್ರದ ಮರ ಉರುಳಿಬಿದ್ದಿದ್ದರಿಂದ ಕಾರು ನಜ್ಜುಗುಜ್ಜಾಗಿದ್ವು. ಮರದಡಿ ಸಿಲುಕಿ ಹಲವು ಬೈಕ್ ಗಳು ಜಖಂ ಆಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ರಾಮಕೃಷ್ಣ ಆಶ್ರಮ ಬಳಿ ಬೃಹತ್ ಮರ ಬಿದ್ದು ಕಾರು ಜಖಂಗೊಂಡಿದೆ. ಹೀಗೆ ನಗರದಾದ್ಯಂತ ಮಳೆಯರಾಯ ಅವಾಂತರ ಸೃಷ್ಠಿಸಿದೆ. ನಗರದಲ್ಲಿ ಭಾನುವಾರ 110 ಮಿಲಿ ಮೀಟರ್ ಮಳೆಯಾಗಿದೆ.
Poll (Public Option)

Post a comment
Log in to write reviews