ಬೀದರ್: 350 ರೈತರ 960 ಎಕರೆ ಜಮೀನುಗಳು ಏಕಾಏಕಿ ವಕ್ಫ್ ಬೋರ್ಡ್‌ಗೆ ಸೇರ್ಪಡೆಯಾಗಿದ್ದು ಅನ್ನದಾತರು ಕಂಲಾಗಿದ್ದಾರೆ.
2013ರಲ್ಲಿ ಗ್ರಾಮದ 350ಕ್ಕೂ ಅಧಿಕ ಅನ್ನದಾತರ ಹೆಸರಿನಲ್ಲಿದ್ದ ಪಹಣಿಗಳು ಏಕಾಏಕಿ ವಕ್ಫ್ ಬೋರ್ಡ್‌ಗೆ ಸೇರ್ಪಡೆಯಾಗಿದೆ. 50-60 ವರ್ಷಗಳಿಂದ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದ ಜಮೀನುಗಳು ವಕ್ಫ್ಗೆ ಸೇರ್ಪಡೆಯಾಗಿದೆ. ಅಂದಿನ ಜಿಲ್ಲಾಧಿಕಾರಿ ಪಿಸಿ ಜಾಫರ್ ರೈತರ ಜಮೀನುಗಳನ್ನು ಏಕಾಏಕಿ ವಕ್ಫ್ಗೆ ಸೇರ್ಪಡೆ ಮಾಡಿದ್ದಾರೆ. ರೈತರ ಜಮೀನುಗಳು ಏಕಾಏಕಿ ವಕ್ಫ್ ಸೇರ್ಪಡೆಯಾಗಿದ್ದರಿಂದ ಸರ್ಕಾರಿ ಸವಲತ್ತುಗಳು ಸಿಗದೇ ಪರದಾಡುತ್ತಿದ್ದಾರೆ. ಈ ಘಟನೆ ಬೀದರ್ ಜಿಲ್ಲೆಯ ಚಟ್ನಳಿ ತಾಲೋಕಿನ ಒಂದೇ ಗ್ರಾಮದಲ್ಲಿ ನಡೆದಿದೆ.
11 ವರ್ಷದಿಂದ ಸತತವಾಗಿ ವಕ್ಫ್ ಬೋರ್ಡ್ ತೆಗೆಯಿರಿ ಎಂದು ಅನ್ನದಾತರು ಹೋರಾಟ ಮಾಡಿ, ಈಗಾಗಲೇ ಹಲವು ರೈತರು ಬಲಿಯಾಗಿದ್ದಾರೆ. ಆದರೂ ಕೂಡ ಇನ್ನೂ ಸರ್ಕಾರ ಸ್ಪಂದನೆ ಮಾಡಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೀವ ಬಿಡುತ್ತೇವೆ ಆದರೆ ನಮ್ಮ ಜಮೀನು ಬಿಡಲ್ಲ. ರೈತರ ಶಾಪ ತಟ್ಟಿದ್ದರೆ ನಿಮ್ಮ ಸರ್ಕಾರ ಖಂಡಿತವಾಗಿ ಬೀಳುತ್ತದೆ ಎಂದು ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Post a comment
Log in to write reviews