ಟಾಪ್ 10 ನ್ಯೂಸ್
ಕಾವೇರಿ ನ್ಯಾಯ ಮಂಡಳಿ ತೀರ್ಪನ್ನ ನಾವು ಒಪ್ಪೋದಿಲ್ಲಾ: ಕಾವೇರಿ ಕ್ರಿಯಾ ಸಮಿತಿ

ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಕಾವೇರಿ ವಾಟರ್ ಮ್ಯಾನೇಜ್‌ಮೆಂಟ್ ಅಥಾರಿಟಿ (CWMA) ಆದೇಶ ಹಿನ್ನೆಲೆ CWMA ಆದೇಶಕ್ಕೆ ಕಾವೇರಿ ಕ್ರಿಯಾ ಸಮಿತಿ ಆಕ್ರೋಶ ವ್ಯಕ್ತಪಡಿಸುತ್ತಿದೆ. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾವೇರಿ ಕ್ರಿಯಾ ಸಮಿತಿ ಕಾವೇರಿ ನ್ಯಾಯ ಮಂಡಳಿಯಿಂದ ಈ ತೀರ್ಪನ್ನ ನಿರೀಕ್ಷೆ ಮಾಡಿರಲಿಲ್ಲ, ತಮಿಳುನಾಡಿನಲ್ಲಿ ಪ್ರವಾಹ ಉಂಟಾಗಿದೆ. ಸಾಕಷ್ಟು ಆಸ್ತಿಗಳು ಹಾನಿಯಾಗಿದೆ. ಹೀಗಿದ್ದರು, ತಮಿಳುನಾಡು ಕಾವೇರಿ ನೀರು ಬಿಡಬೇಕೆಂದು ಒತ್ತಾಯ ಮಾಡುತ್ತಿದೆ. ನಮ್ಮ ರಾಜ್ಯದ ನಾಯಕರ ಇಚ್ಛಾಶಕ್ತಿ ಕೊರತೆಯನ್ನ ತಮಿಳುನಾಡಿನವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕಾವೇರಿ ನ್ಯಾಯ ಮಂಡಳಿ ತೀರ್ಪನ್ನ ನಾವು ಒಪ್ಪೋದಿಲ್ಲಾ. ಮುಂದಿನ ದಿನಗಳಲ್ಲಿ ಕಾವೇರಿ ಕ್ರಿಯಾ ಸಮಿತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ.ರಾಜ್ಯಾಧ್ಯಂತ ಜನಾಂದೋಲನ ಹಮ್ಮಿಕೊಳ್ಳುತ್ತೇವೆ ಎಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಜೈ ಪ್ರಕಾಶ್ ಹೇಳಿದರು.
Poll (Public Option)

Post a comment
Log in to write reviews