2024-09-19 04:34:52

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಾವು ಎನ್‌ಡಿಎ ಮೈತ್ರಿಕೂಟದ ಭಾಗ: ಚಂದ್ರಬಾಬು ನಾಯ್ಡು 

ನಾವು ಎನ್‌ಡಿಎ ಮೈಕೂಟದ ಭಾಗ ಎಂದು ತೆಲುಗೇಶಂ ಪಾರ್ಟಿಯ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಎನ್ ಡಿಎ ಜೊತೆ ಚುನಾವಣೆ ಎದುರಿಸಿದ್ದೇವೆ. ಎನ್ ಡಿಎ ಒಕ್ಕೂಟದ ಜೊತೆ ಗೆದ್ದಿದ್ದೇವೆ. ಅವರ ಜೊತೆಯೇ ಇರುತ್ತೇವೆ ಎಂದಿದ್ದಾರೆ.
ನಾವು ಎನ್ ಡಿಎ ಮೈತ್ರಿಕೂಟದ ಭಾಗ. ಟಿಡಿಪಿ ಜನಸೇನಾ ಪಕ್ಷ ಬಿಜೆಪಿ ಒಗ್ಗಟ್ಟಾಗಿ ಕೆಲಸ ಮಾಡಿದ್ದೆವು. ಈಗ ಮೂರು ಪಕ್ಷಗಳು ಒಟ್ಟಾಗಿ ಸರ್ಕಾರ ರಚನೆ ಮಾಡುತ್ತೇವೆ. ಬುಧವಾರ (ಇಂದು) ಎನ್ ಡಿಎ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ. 
ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಎನ್ ಡಿಎ 292 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಇಂಡಿಯಾ ಮೈತ್ರಿಕೂಟ 234 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂಟ ಸಹ ಸರ್ಕಾರ ರಚನೆಗೆ ಕಸರತ್ತು ನಡೆಸಿ ಟಿಡಿಪಿ ನಾಯಕರನ್ನ ಸಂಪರ್ಕ ಮಾಡಿದೆ ಎನ್ನಲಾಗಿದೆ.

Post a comment

No Reviews