
ನವದೆಹಲಿ:ಪ್ರಧಾನಿ ನರೇಂದ್ರಮೋದಿ ಕೇರಳದ ವಯನಾಡಿಗೆ ಶನಿವಾರ ಬೇಟಿ ನೀಡಲಿದ್ದಾರೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸರಿರುವ ಅವರು ವಯನಾಡು ಸುತ್ತಮುತ್ತ ವೈಮಾನಿಕ ಸಮೀಕ್ಷೆಯನ್ನು ನಡೆಸಿ ನಂತರ ಅವರು ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವಾನ ಹೇಳಲಿದ್ದಾರೆ.
ಜೂನ್ 30ರಂದು ಸಂಭವಿಸಿದ ಭೂಕುಸಿತದಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ನೂರಾರು ಮಂದಿ ಗಾಯ ಗೊಂಡಿದ್ದಾರೆ. ಭಾರತೀಯ ಸೇನೆ, NDRF ಮತ್ತು ಸ್ಥಳೀಯ ತುರ್ತು ಪ್ರತಿಕ್ರಿಯೆ ವಿಭಾಗಗಳು ತಮ್ಮ ಬೃಹತ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿವೆ, ಇದೀಗ ತಂಡಗಳು ಅರಣ್ಯ ಪ್ರದೇಶಗಳ ಮೇಲೆ ಕೇಂದ್ರೀಕರಿಸಿವೆ. ಕೇರಳ ಸರ್ಕಾರವು ನಾಪತ್ತೆಯಾದವರ ಕುಟುಂಬಗಳು ಮತ್ತು ಸ್ಥಳೀಯ ನಿವಾಸಿಗಳ ನೆರವಿನೊಂದಿಗೆ ಶೋಧ ಕಾರ್ಯಗಳಲ್ಲಿ ಪಡೆದುಕೊಂಡಿದೆ.
Poll (Public Option)

Post a comment
Log in to write reviews