
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲೇಜು ಓದುತ್ತಿರಬೇಕಾದರೆ ಹುಡುಗಿ ಜೊತೆ ಸ್ನೇಹ ಬೆಳೆದಿತ್ತಂತೆ. ಅದು ಪ್ರೀತಿಗೆ ತಿರುಗಿತ್ತಾ? ಗೊತ್ತಿಲ್ಲ! ಆದರೆ, ಅಂತರ್ಜಾತಿವಿವಾಹ ಮಾಡಿಕೊಳ್ಳಬೇಕೆಂಬ ತುಡಿತ ಮಾತ್ರ ಅಂದೇ ಇತ್ತಂತೆ. ಇದು ಕೈಗೂಡಿತ್ತಾ? ಇಂತಹ ಸ್ವಾರಸ್ಯಕರ ಸನ್ನಿವೇಶವನ್ನು ಮುಖ್ಯಮಂತ್ರಿ ಬಿಚ್ಚಿಟ್ಟಿದ್ದಾರೆ.
ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೆಬ್‌ಸೈಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ತಮ್ಮ ಪ್ರೇಮಾಂಕುರ ನೆನಪಿಸಿಕೊಂಡು ಪುಳಕಗೊಂಡಿದ್ದಾರೆ.
ನಾನು ಕೂಡ ಅಂತರ್ಜಾತಿ ಮದುವೆ ಮಾಡಿಕೊಳ್ಳಬೇಕು ಎಂದು ಆಸೆ ಪಟ್ಟಿದ್ದೆ. ನಾನು ಕಾನೂನು ಕಾಲೇಜಿನಲ್ಲಿ ಓದುವಾಗ ಒಂದು ಹುಡುಗಿ ಜೊತೆ ಸ್ನೇಹ ಬೆಳೆದಿತ್ತು. ಆಕೆಯನ್ನು ನಾನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಮದುವೆ ಆಗಲು ಆಗಲಿಲ್ಲ. ಏಕೆಂದರೆ ಹುಡುಗಿನೂ ಒಪ್ಪಲಿಲ್ಲ, ಹುಡುಗಿಯ ಮನೆಯವರೂ ಒಪ್ಪಲಿಲ್ಲ. ಹಾಗಾಗಿ ನಾನು ಅಂತರ್ಜಾತಿ ಮದುವೆ ಆಗಲಿಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ನಮ್ಮ ಜಾತಿಯ ಹುಡುಗಿಯನ್ನೇ ಮದುವೆ ಮಾಡಿಕೊಳ್ಳಬೇಕಾಯಿತು ಎಂದು ತಮ್ಮ ಕಾಲೇಜು ದಿನದ ಪ್ರೇಮ ಕಹಾನಿ ಬಿಚ್ಚಿಟ್ಟು ಸಿಎಂ ಸಿದ್ದರಾಮಯ್ಯ ಸಭೆಯನ್ನು ನೆಗೆಗಡಲಲ್ಲಿ ತೇಲಿಸಿದರು.
Poll (Public Option)

Post a comment
Log in to write reviews