2024-12-24 07:34:05

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅನೈತಿಕ ಸಂಬಂಧ ಹೊಂದಿದ ಮಹಿಳೆಗೆ ಮರಕ್ಕೆ ಕಟ್ಟಿ ಚಪ್ಪಲಿ ಹಾರ ಹಾಕಿದ ಗ್ರಾಮಸ್ಥರು.!

ಉತ್ತರ ಪ್ರದೇಶ: ಅನೈತಿಕ ಸಂಬಂಧವನ್ನು ಹೊಂದಿದ ಮಹಿಳೆಗೆ ಪಂಚಾಯ್ತಿ ಆದೇಶದ ಮೇರೆಗೆ ಗ್ರಾಮಸ್ಥರು ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ಮುಖಕ್ಕೆ ಮಸಿ ಬಳಿದು, ತಲೆ ಬೋಳಿಸಿದ್ದು ಮಾತ್ರವಲ್ಲದೆ, ಮಕ್ಕಳ ಎದುರೇ ಆ ಮಹಿಳೆಗೆ ಚಪ್ಪಲಿ ಹಾರ ಹಾಕಿ ಅವಮಾನಿಸಿರುವ ಚೋಟ್ಕಿ ಇಬ್ರಾಹಿಂಪುರ ಗ್ರಾಮದಲ್ಲಿ ನಡೆದಿದೆ.

ವಿವಾಹಿತ ಮಹಿಳೆಯೊಬ್ಬಳು ಅದೇ ಗ್ರಾಮದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆ ಎಂಬ ಆರೋಪ ಕೇಳಿ ಬಂದಿದ್ದು, ಈ ಪ್ರಕರಣ ಪಂಚಾಯ್ತಿ ಮೆಟ್ಟಿಲೇರಿದೆ. ಈ ಪಂಚಾಯ್ತಿ ಆದೇಶದ ಮೇರೆಗೆ ಗ್ರಾಮಸ್ಥರು ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ, ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದು ಆಕೆಯ ಹೆತ್ತ ಮಕ್ಕಳ ಮುಂದೆಯೇ ಆಕೆಯ ಕುತ್ತಿಗೆಗೆ ಚಪ್ಪಲಿ ಹಾರವನ್ನು ಹಾಕಿ ಅಮಾನುಷವಾಗಿ ವರ್ತಿಸಿದ್ದಾರೆ. ಈ ಘಟನೆಯ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ಈ ಕೃತ್ಯ ಎಸಗಿದ 15 ಜನರನ್ನು ಬಂಧಿಸಲಾಗಿದೆ. ಇನ್ನೂ ಐವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಹಟಿಗಾಂವ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Post a comment

No Reviews