
ನವದೆಹಲಿ: ಬಿಜೆಪಿ ಶಾಲು ಧರಿಸಿ ಅಯೋಧ್ಯೆ ಹೆಸರಿನ ಪ್ರತಿಕೃತಿಯನ್ನು ಸುಡುತ್ತಾ ವ್ಯಕ್ತಿಯೊಬ್ಬ ಆಕ್ರೋಶ ಹೊರಹಾಕುವ ವಿಡಿಯೋ ವೈರಲ್ ಆಗಿದೆ.
ಅಯೋಧ್ಯೆಯಲ್ಲಿಯೇ ಭಾರತೀಯ ಜನತಾ ಪಕ್ಷ ಸೋಲು ಕಂಡದಕ್ಕಾಗಿ ಅಯೋಧ್ಯೆಯ ಜನರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಿ ಜನರನ್ನು ನಿಂದಿಸುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ಶಾಲು ಧರಿಸಿ ಅಯೋಧ್ಯೆ ಹೆಸರಿನ ಪ್ರತಿಕೃತಿಯನ್ನು ಸುಡುತ್ತಾ ವ್ಯಕ್ತಿಯೊಬ್ಬ ಆಕ್ರೋಶ ಹೊರಹಾಕುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ, ಬಿಜೆಪಿ ಬೆಂಬಲಿಗನಂತೆ ಕಾಣುವ ವ್ಯಕ್ತಿಯೊಬ್ಬ ತನ್ನ ಕುತ್ತಿಗೆಗೆ ಬಿಜೆಪಿ ಶಾಲ್ ಧರಿಸಿ, ರಸ್ತೆಯ ಮೇಲೆ ಅಯೋಧ್ಯೆಯ ಹೆಸರನ್ನು ಬರೆದು ಬೆಂಕಿ ಹಚ್ಚಿದ್ದಾನೆ. ಅದರಲ್ಲಿ “ಪ್ರಭು ಶ್ರೀ ರಾಮ್ ಕಾ ಲಾಜ್ ತೋ ರಾಖ್ ಲೆಟೆ” ಎಂದು ಬರೆಯಲಾಗಿದೆ. ನೆಟ್ಟಿಗರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ಇದರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
Poll (Public Option)

Post a comment
Log in to write reviews